ಮಂಗಳೂರು | ಬೋನಸ್ ಆಮಿಷ: 3.32 ಲಕ್ಷ ರೂ. ಆನ್‌ಲೈನ್ ವಂಚನೆ
Update: 2026-01-26 22:38 IST
ಮಂಗಳೂರು, ಜ.26: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂ.ಗಳನ್ನು ಎಗರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 3,32,247.18 ರೂ. ಹಣವನ್ನು ವರ್ಗಾವಣೆ ಮಾಡಿಸಿ ಆರೋಪಿಗಳು ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ವ್ಯಕ್ತಿಯೊಬ್ಬರ ತಂದೆಯ ಮೊಬೈಲ್ ಗೆ ಅಪರಿಚಿತರ ಮೊಬೈಲ್ ನಂಬ್ರ-9582276944 ನಿಂದ ಕರೆ ಬಂದಿದ್ದು, ಅಪರಿಚಿತರು ಕ್ರೆಡಿಟ್ ಕಾರ್ಡ್ ಬೊನಸ್ ಬಂದಿದೆ ಎಂದು ತಿಳಿಸಿರುತ್ತಾರೆ. ನಂತರ ಅಪರಿಚಿತರ ಮಾತನ್ನು ನಂಬಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ.
ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.