ಮಂಗಳೂರು | ಕಾರಿನಲ್ಲಿ ಮಾರಕಾಸ್ತ್ರ ಸಾಗಾಟ ಪತ್ತೆ : ಪ್ರಕರಣ ದಾಖಲು
Update: 2026-01-26 22:31 IST
ಮಂಗಳೂರು, ಜ.26: ಮುಡಿಪು ಚೆಕ್ ಪೋಸ್ಟ್ ಬಳಿ ಶನಿವಾರ ರಾತ್ರಿ ಕಾರಿನಲ್ಲಿವ್ಯಕ್ತಿಯೊಬ್ಬನು ಮಾರಕಾಸ್ತ್ರ ವನ್ನು ಕೊಂಡೊಯ್ಯುತ್ತಿರುವುದನ್ನು ಕೊಣಾಜೆ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಕೊಣಾಜೆ ಪೊಲೀಸ್ ಠಾಣೆಯ ಎಎಸ್ಐ ಮೋಹನ್ ಎಲ್ ಅವರು ಸಿಬ್ಬಂದಿಯೊಂದಿಗೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ತಡರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮುಡಿಪು ಚೆಕ್ ಪೋಸ್ಟ್ ಬಳಿ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ 6 ಇಂಚು ಮರದ ಇಡಿ ಇರುವ 2 ಅಡಿ ಉದ್ದದ ತುದಿ ಬೆಂಡಾಗಿರುವ ಮಚ್ಚು ಪತ್ತೆಯಾಗಿದೆ. ಈ ಮಚ್ಚನ್ನು ಆರೋಪಿಯು ಅಕ್ರಮವಾಗಿ ತಡರಾತ್ರಿಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಕೊಂಡೊಯ್ಯುತ್ತಿದ್ದ ಎನ್ನಲಾಗಿದ್ದು, ಕಾರನ್ನು ಮಾರಕಾಸ್ತ್ರ ಸಮೇತ ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.