×
Ad

ಮಂಗಳೂರು| ಹಜ್ ಯಾತ್ರಿಕರು 2ನೆ ಕಂತಿನ ಹಣ ಪಾವತಿಗೆ ಸೂಚನೆ

Update: 2024-11-26 19:48 IST

ಮಂಗಳೂರು: ಪ್ರಸಕ್ತ (2025ನೇ) ಸಾಲಿನ ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸಿ ಮೊದಲ ಕುಂತು ಪಾವತಿಸಿದವರು ಎರಡನೇ ಕಂತಿನ ಹಣ ತಲಾ 1,42,000 ರೂ.ವನ್ನು ಡಿಸೆಂಬರ್ 16ನೇ ತಾರೀಕಿನೊಳಗೆ ಪಾವತಿಸಬೇಕು.

ಅರ್ಜಿ ಸಲ್ಲಿಸಿ ಕಾಯ್ದಿರಿಸಿದವರಿಗೆ (ವೆಯ್ಟಿಂಗ್ ಲಿಸ್ಟ್) ಸಂಖ್ಯೆ 1ರಿಂದ 2074ರವರೆಗೆ ಆಯ್ಕೆಯಾಗಿದ್ದು, ಅವರು ಎರಡೂ ಕಂತಿನ ಹಣ 2,72,300 ರೂ.ವನ್ನು ಡಿ.16ರೊಳಗೆ ಪಾವತಿಸಿ ರಸೀದಿ, ಅರ್ಜಿಯ ಪ್ರತಿ, ವೈದ್ಯಕೀಯ ಪ್ರಮಾಣ ಪತ್ರಗಳನ್ನು ರಾಜ್ಯ ಹಜ್ ಸಮಿತಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಮೊ.ಸಂ: 9916647651/9019144555ನ್ನು ಸಂಪರ್ಕಿಸಬಹುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News