ಕೊಂಕಣಿ ಅಕಾಡಮಿ: ʼಕಾವ್ಯಾಂ ವ್ಹಾಳೊ-9ʼ ಶೀರ್ಷಿಕೆಯಡಿ ಕವಿಗೋಷ್ಠಿ
Update: 2025-12-08 23:14 IST
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ಅಕಾಡಮಿಯ ಸಭಾಂಗಣದಲ್ಲಿ ʼಕಾವ್ಯಾಂ ವ್ಹಾಳೊ-9ʼ ಶೀರ್ಷಿಕೆಯಡಿ ಕವಿಗೋಷ್ಠಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಕಾಡೆಮಿಯು ಹೊಸ ಹೊಸ ಕವಿಗಳನ್ನು ಗುರುತಿಸಿ ವೇದಿಕೆಯನ್ನು ನೀಡುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿ ಇನ್ಫೆಂಟ್ ಜೀಸಸ್ ಶ್ರೈನ್‌ನ ನಿರ್ದೇಶಕ ಫಾ. ಸ್ಟೀವನ್ ಆಲ್ವಿನ್ ಪಿರೇರಾ ಭಾಗವಹಿಸಿದ್ದರು. ಕವಿಗಳಾದ ಆ್ಯಂಡ್ರು ಎಲ್. ಡಿಕುನ್ಹಾ ಏಂಜಲ್ ಕುಟಿನ್ಹಾ, ರಿಷೊನ್ ನಜ್ರೆತ್, ಆನ್ಯ ದಾಂತಿ ಕವನ ವಾಚಿಸಿದರು. ವಿನ್ಸೆಂಟ್ ಪಿಂಟೊ ಆಂಜೆಲೊರ್, ಕೃತಿಕಾ ಕಾಮತ್, ರೇಮಂಡ್ ಡಿಕುನ್ಹಾ, ಎಲ್ಸನ್ ಡಿಕೋಸ್ತ ಹಿರ್ಗಾನ್, ಸೋನಿಯಾ ಡಿಕೋಸ್ತ, ಲವೀನ ದಾಂತಿ ಕವಿತೆಗಳನ್ನು ವಾಚಿಸಿದರು.
ಅಕಾಡಮಿ ಸದಸ್ಯರಾದ ನವೀನ್ ಲೋಬೊ, ಸಮರ್ಥ್ ಭಟ್ ಉಪಸ್ಥಿತರಿದ್ದರು. ಸಪ್ನಾ ಮೇ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.