ಮಂಗಳೂರು | ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಮುಹಮ್ಮದ್ ಝಾಹಿದ್‌ಗೆ ವೈಯಕ್ತಿಕ ಅವಳಿ ಪ್ರಶಸ್ತಿ
Update: 2025-11-23 18:01 IST
ಮಂಗಳೂರು, ನ.23: ಇಂಫಾಕ್ಟ್ ಆರ್ಟ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಸಹಯೋಗದಲ್ಲಿ ಸುಳ್ಯದ ಅಮರಜ್ಯೋತಿ ಕೆ ವಿ ಜಿ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಿಳಿಯಾರ್ ಬಾತಿಷಾ ಹಾಗೂ ರುಕಿಯಾ ರವರ ಪುತ್ರ ಮುಹಮ್ಮದ್ ಝಾಹಿದ್ ರವರು ವೈಯಕ್ತಿಕ ಬಾಲಕರ ವೈಟ್ ಬೆಲ್ಟ್ ವಿಭಾಗದ ಕಟ ಪ್ರಥಮ ಹಾಗೂ ಕುಮಿಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ.
ಝಾಹಿದ್ ರವರು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ.