×
Ad

ಮಂಗಳೂರು: ಅನಿವಾಸಿ ಉದ್ಯಮಿ ದೇವೆಶ್ ಆಳ್ವ ನಿಧನ

Update: 2023-12-31 14:17 IST

ದುಬೈ: ಮಂಗಳೂರು ಮೂಲದ ಅನಿವಾಸಿ ಉದ್ಯಮಿ ದೇವೆಶ್ ಆಳ್ವ (50) ಅವರು ಶನಿವಾರ ಯುಎಇ ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಕೆನರಾ ಕಾಲೇಜು ಮತ್ತು ಎಸ್.ಡಿ.ಎಂ.ಸಿ.ಇ.ಟಿ. ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ದೇವೆಶ್ ಆಳ್ವ ದುಬೈಯಲ್ಲಿ ಪಯೋನಿರ್ ಮರೈನ್ ಸಂಸ್ಥೆಯನ್ನು ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ದುಡಿಯುತ್ತಿದ್ದರು.

ಯು.ಎ.ಇ. ಬಂಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತಿದ್ದ ಇವರು, ಯು.ಎ.ಇ.ಯ ಉದ್ದಗಲಗಳಲ್ಲಿ ನಡೆಯುವ ತುಳುನಾಡಿನ ಹಲವು ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದರು.

ಮೃತ ದೇವೆಶ್ ಆಳ್ವ ಅವರು ಪತ್ನಿ, ಓರ್ವ ಪುತ್ರ ಮತ್ತು ಹೆತ್ತವರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News