ಮಂಗಳೂರು: ಯಕ್ಷಗುರು ಪಿ.ವಿ. ಪರಮೇಶ್ ನಿಧನ
Update: 2025-07-25 22:45 IST
ಮಂಗಳೂರು, ಜು.25: ನಗರದ ಕದ್ರಿ ನಿವಾಸಿ, ಯಕ್ಷಗಾನ ರಂಗದ ಖ್ಯಾತ ಹವ್ಯಾಸಿ ಬಣ್ಣದ ವೇಷಧಾರಿ, ಹಿಮ್ಮೇಳ -ಮುಮ್ಮೇಳಗಳ ಸವ್ಯಸಾಚಿ ಕಲಾವಿದ, ಯಕ್ಷಗುರು ಅಂತಾರಾಷ್ಟ್ರೀಯ ಖ್ಯಾತ ಪಿ.ವಿ. ಪರಮೇಶ್ (63) ಶುಕ್ರವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನವರು ಮೃತರು ಅಗಲಿದ್ದಾರೆ.
*ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಡಾ.ಎಂ.ಪ್ರಭಾಕರ ಜೋಶಿ, ಪ್ರದೀಪ್ ಕುಮಾರ್ ಕಲ್ಕೂರ, ಶರತ್ ಕದ್ರಿ ಸಂತಾಪ ಸೂಚಿಸಿದ್ದಾರೆ.