ಮಂಜನಾಡಿ: ಕುಸಿದು ಬಿದ್ದು ನವ ವಿವಾಹಿತ ಮೃತ್ಯು
Update: 2025-07-09 21:32 IST
ಕೊಣಾಜೆ : ರಕ್ತದೊತ್ತಡದಿಂದ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಮೃತ ಯುವಕನನ್ನು ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆ ದಿ. ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್ (32) ಎಂದು ಗುರುತಿಸಲಾಗಿದೆ.
ನಗರದಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಭರತ್ ನಾಲ್ಕು ದಿನದ ಹಿಂದೆ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಎಪ್ರಿಲ್ 22ರಂದು ಭರತ್ ವಿವಾಹ ಸಮಾರಂಭ ನಡೆದಿದ್ದು, ಪತ್ನಿ ನಗರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭರತ್ ಅವರಿಗೆ ತಾಯಿ ಹಾಗೂ ಮೂವರು ಸೋದರಿಯರು ಇದ್ದಾರೆ.