ಮರ್ಕಝುಲ್ ಹುದಾ ಮದೀನಾ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಸೌದಿ ಅರೇಬಿಯಾದ ಮದೀನಾ ಘಟಕದ ಮಹಾಸಭೆಯು ಇತ್ತೀಚಿಗೆ ಉಹುದ್, ಜಬಲ್ ರುಮಾತ್ ವಠಾರದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಮ್ ಝೈನಿ ಕಾಮಿಲ್ ಅವರ ನೇತೃ ತ್ವದಲ್ಲಿ ನಡೆಯಿತು.
ಈ ಸಂದರ್ಭ ಮದೀನಾ ಸಮಿತಿಯನ್ನು ಪುನಾರಚನೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಶ್ರಫ್ ಸಖಾಫಿ ನೂಜಿ, ಅಧ್ಯಕ್ಷರಾಗಿ ಸುಲೈಮಾನ್ ಸಅದಿ ಸೋಮವಾರಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ಕೆಸಿ ರೋಡ್, ಕೋಶಾಧಿಕಾರಿಯಾಗಿ ತಾಜುದ್ದೀನ್ ಸುಳ್ಯ, ಉಪಾಧ್ಯಕ್ಷರಾಗಿ ಅಬೂಬಕರ್ ಮುಸ್ಲಿಯಾರ್ ಉದ್ದಬೆಟ್ಟು, ಕಾರ್ಯದರ್ಶಿಯಾಗಿ ಶರೀಫ್ ಕಬಕ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರುಗಳಾಗಿ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ, ಫಾರೂಕ್ ಮುಸ್ಲಿಯಾರ್ ಎರುಮಾಡ್, ಸಿದ್ದೀಕ್ ಕನ್ಯಾನ, ಅಬ್ದುಲ್ ಹಮೀದ್ ಪೊರ್ಕುಂಜ, ಅಬ್ದುಲ್ ಹಕೀಮ್ ಬೋಳಾರ್, ಅಶ್ರಫ್ ಕಿನ್ಯ, ಹುಸೈನ್ ಮಾಪ್ಪಲ್, ಅಶ್ರಫ್ ಸಂಗಮ್ ಸುಳ್ಯ, ಬದ್ರುದ್ದೀನ್ ಕಬಕ ಅವರನ್ನು ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ಮರ್ಕಝುಲ್ ಹುದಾ ಸೌದಿ ರಾಷ್ಟೀಯ ಸಮಿತಿ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಉದ್ಘಾಟನೆ ಮಾಡಿದರು. ಮರ್ಕಝುಲ್ ಹುದಾ ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಸ್ವಾಗತಿಸಿ, ವಂದಿಸಿದರು.