ಮೇ 22 ರಂದು ಮೀಫ್ ಎಕ್ಸೆಲೆನ್ಸ್ ಅವಾರ್ಡ್ ಸಮಾರಂಭ
ಮಂಗಳೂರು: ದ.ಕ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಹೀಗೆ ಒಟ್ಟು 4 ಜಿಲ್ಲೆಗಳಲ್ಲಿ, ಜಿಲ್ಲಾ ಮಟ್ಟದಲ್ಲಿ SSLC ಮತ್ತು PUC ಯಲ್ಲಿ ಅತ್ಯಧಿಕ ಅಂಕಗಳಿಸಿರುವ MEIF ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮತ್ತು ಸರಕಾರಿ ಶಾಲೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ, SSLC ಮತ್ತು PUC ಯಲ್ಲಿ ಗರಿಷ್ಠ ಡಿಸ್ಟಿಂಕ್ಷನ್ ಪಡೆದ ಶಾಲೆಗಳಿಗೆ, ಹಾಗೂ ಶೇ 100% ಫಲಿತಾಂಶ ಪಡೆದ ವಿದ್ಯಾ ಸಂಸ್ಥೆಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಮೇ 22 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಅಡ್ಯಾರಿನ ಬರಕಾ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.
ಈ ಸಮಾರಂಭಕ್ಕೆ ಅತಿಥಿಗಳಾಗಿ ಡಾ. ಮೋಹನ್ ಆಳ್ವ, ಡಾ. ಯು. ಟಿ ಇಫ್ತಿಕಾರ್, ಯೆನೆಪೋಯ ಅಬ್ದುಲ್ಲಾ ಜಾವೇದ್, ಅಶ್ರಫ್ ಬಜ್ಜೆ, ಸುಹೈಲ್ ಅಹ್ಮದ್, ಹರಿಪ್ರಸಾದ್, ಕೆ.ಎ ಶಾದಲಿ, ಝಮೀರ್ ಅಹ್ಮದ್, ಉಮರ್ ಟಿ.ಕೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ 4 ಜಿಲ್ಲೆಗಳ ಸುಮಾರು 400 ಕ್ಕೂ ಮಿಕ್ಕ ಪ್ರತಿನಿಧಿಗಳು ಈಗಾಗಲೇ ನೋಂದಾಯಿಸಿದ್ದಾರೆ. ಅಪರಾಹ್ನ MEIF ವಾರ್ಷಿಕ ಮಹಾಸಭೆಯು ಜರಗಲಿದೆ.ಅದರಂತೆ ಎಲ್ಲಾ ಜಿಲ್ಲೆಗಳ ನೋಂದಾಯಿತ ಪ್ರತಿನಿಧಿಗಳು, ಮುಖ್ಯೋಪಾಧ್ಯಾಯರು, ಪ್ರಶಸ್ತಿ ವಿಜೇತರು, ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ MEIF ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.