×
Ad

ಎಲಿಮಲೆ ಮಸೀದಿಗೆ ಕಿಡಿಗೇಡಿಗಳಿಂದ ಬೆದರಿಕೆ: ಪ್ರಕರಣ ದಾಖಲು

Update: 2024-08-23 21:44 IST

ಸುಳ್ಯ: ಎಲಿಮಲೆ ಜುಮ್ಮಾ ಮಸೀದಿ ವಠಾರಕ್ಕೆ ರಾತ್ರಿ ವೇಳೆ ಇಬ್ಬರು ವ್ಯಕ್ತಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿ ಹೋಗಿದ್ದಾರೆಂದು ಮಸೀದಿ ಕಮಿಟಿಯವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಶುಕ್ರವಾರ ನಡೆದಿದೆ.

ಎಲಿಮಲೆ ಮಸೀದಿಗೆ ಗುರುವಾರ ರಾತ್ರಿ ಸುಮಾರು 11 ಘಂಟೆಗೆ ಬಂದ ಇಬ್ಬರು ಕಿಡಿಗೇಡಿಗಳು ಮಸೀದಿಯ ಆವರಣದಲ್ಲಿ ನಿಂತು ಜೋರಾಗಿ ಬೈದು ಬೆದರಿಕೆ ಹಾಕಿದ್ದಾರೆ. ಸತೀಶ್ ಗುಡ್ಡನಮನೆ ಮತ್ತು ಇತರರು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಎರಡು ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲಿ ಇಬ್ಬರು ಅಡ್ಡಗಟ್ಟಿ ನೀವು ಈ ರೀತಿಯ ಟೋಪಿಗಳನ್ನು ಧರಿಸಿ ಶಾಲೆಗೆ ಹೋಗಬಾರದು ಎಂದು ಹೆದರಿಸಿದ್ದರು ಎಂದೂ ಸುಬ್ರಮಣ್ಯ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಶುಕ್ರವಾರ ಪುತ್ತೂರು ಡಿ ವೈ ಎಸ್ ಪಿ ಅರುಣ್ ನಾಗೇಗೌಡ, ಸುಬ್ರಮಣ್ಯ ಠಾಣಾ ಎಸ್.ಐ. ಕಾರ್ತಿಕ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News