×
Ad

ಮೀಯಪದವು: ಸ್ನೇಹಾಲಯದ ವಾರ್ಷಿಕೋತ್ಸವ

Update: 2023-08-27 22:10 IST

ಮಂಗಳೂರು, ಆ.27: ಸಂತ ಮದರ್ ತೆರೇಸಾರ ಜನ್ಮದಿನದಂದು (2009) ನಿರಾಶ್ರಿತ ಮಾನಸಿಕ ಅಸ್ವಸ್ಥರ ಸೇವೆಗಾಗಿ ಪ್ರಾರಂಭಗೊಂಡ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ತನ್ನ 14ನೇ ವಾರ್ಷಿಕೋತ್ಸವವನ್ನು ಆಚರಿಸಿತು.

ಸಮಾಜಕ್ಕೆ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಜೊತೆಗೆ ಅನುಕಂಪ, ದಯೆ ಮತ್ತು ಸಹಾನುಭೂತಿಯ ತತ್ವಗಳ ಮೇಲೆ ಸ್ಥಾಪಿತವಾದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಬಡವರು ಮತ್ತು ನಿರ್ಗತಿಕರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿರುವ ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಸಂತ ದೇವ ಸಹಾಯ ಪಿಳ್ಳೈ ಅವರ ಗ್ರೊಟ್ಟೊವನ್ನು ವರ್ಕಾಡಿ ದೇವಾಲಯದ ಪ್ರಧಾನಗುರು ವಂ. ಫಾ. ಬಾಸಿಲ್ ವಾಸ್ ಆಶೀರ್ವದಿಸಿದರು.

ಈ ಸಂದರ್ಭ ಸಮುದಾಯದ ಪ್ರಮುಖರು,ಧರ್ಮಗುರುಗಳು, ಸಹೋದರ-ಸಹೋದರಿಯರು, ದಾನಿಗಳು ಹಾಗೂ ಸ್ನೇಹಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.

ಬಳಿಕ ಬಲಿಪೂಜೆಯನ್ನು ಅರ್ಪಿಸಲಾಯಿತು. ಬಲಿಪೂಜೆಯ ಮುಖ್ಯ ಅರ್ಚಕರಾಗಿ ವಂ.ಗುರು ಫಾ. ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಒಸಿಡಿ ಹಾಗೂ ಸಹ ಅರ್ಚಕರಾಗಿ ಫಾ. ಬಾಸಿಲ್ ವಾಸ್, ಫಾ. ಎಡ್ವಿನ್ ಪಿಂಟೊ, ಫಾ. ಸಿರಿಲ್ ಡಿಸೋ ಭಾಗವಹಿಸಿದರು.

ಪವಿತ್ರ ಬಲಿ ಪೂಜೆಯ ನಂತರ ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಕೃತಜ್ಞತೆಯ ಸ್ಪರ್ಶವನ್ನು ವ್ಯಕ್ತಪಡಿಸಿದರು. ಈ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಲ್ಪಟ್ಟಿರುವ ಮಾರ್ಕೊ ಸ್ಟಾನ್ಲಿ ಫೆರ್ನಾಂಡಿಸ್‌ರನ್ನು ಸನ್ಮಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News