×
Ad

ಮೊಡಂಕಾಪು ಕಾರ್ಮೆಲ್ ಕಾಲೇಜು: 2023- 24 ನೇ ಸಾಲಿನ ವಿದ್ಯಾರ್ಥಿ ಪರಿಷತ್ ಅಸ್ತಿತ್ವಕ್ಕೆ

Update: 2023-09-22 11:05 IST

ಬಂಟ್ವಾಳ: ಮೊಡಂಕಾಪು ಕಾರ್ಮೆಲ್ ಕಾಲೇಜು ವಿದ್ಯಾರ್ಥಿ ಪರಿಷತ್ ಇದರ 2023- 24 ನೇ ಸಾಲಿನ ಉದ್ಘಾಟನಾ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪ್ರಕಾಶ್ ಚಂದ್ರ ಬಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಯಕತ್ವದ ಗುಣವಿದೆ. ನಾವೆಲ್ಲರೂ ನಮ್ಮ ಜೀವನಕ್ಕೆ ನಾಯಕರು, ವಿದ್ಯಾರ್ಥಿಗಳಿಗೆ ಸಾಧಿಸಬೇಕೆಂಬ ಛಲ ಇದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಮುಂದುವರಿಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಡಂಕಾಪು ಕಾರ್ಮೆಲ್ ಕಾಲೇಜು ಪ್ರಾಂಶುಪಾಲೆ ವಂದನೀಯ ಭಗಿನಿ ಲತಾ ಫೆರ್ನಾಂಡಿಸ್ ಎ ಸಿ, ಅವರು ವಿದ್ಯಾರ್ಥಿ ಪರಿಷತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿ, ಮುಂದಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಬೇಕಾದ ಮಾರ್ಗದರ್ಶನ ನೀಡಿದರು.

ಕಾಲೇಜು ವಾಣಿಜ್ಯ ಉಪನ್ಯಾಸಕ ಜೋಯಲ್ ಮಸ್ಕರೇನಸ್, ವಿದ್ಯಾರ್ಥಿ ಪರಿಷತ್ ನಾಯಕಿ ಕುಮಾರಿ ಅಲ್ವಿಶ ಫ್ರಾಂಕ್, ಕಾರ್ಯದರ್ಶಿ ಕುಮಾರಿ ರಮ್ಜೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಪ್ರಾಂಶುಪಾಲರು ಕಾಲೇಜು ಬಾವುಟವನ್ನು ವಿದ್ಯಾರ್ಥಿ ಪರಿಷತ್ತಿನ ನಾಯಕಿ ಹಾಗೂ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ನಾಯಕರು ಪ್ರಾಂಶುಪಾಲರ ನೇತೃತ್ವದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ವಿದ್ಯಾರ್ಥಿ ಪರಿಷತ್ ನಾಯಕಿ ಅಲ್ವಿಶ ವಾರ್ಷಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವಿಧ್ಯಾರ್ಥಿಗಳಾದ ರಮ್ಜೀನಾ ಸ್ವಾಗತಿಸಿ, ಮುಸ್ತಾಫ ವಂದಿಸಿದರು. ಆಸಿಯ ಕಾರ್ಯಕ್ರಮ ನಿರೂಪಿಸಿದರು.


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News