ಮೂಡುಬಿದಿರೆ | ಹಲ್ಲೆ ಪ್ರಕರಣ : ಮೂವರು ಆರೋಪಿಗಳಿಗೆ ಜಾಮೀನು
Update: 2025-11-29 23:55 IST
ಸಾಂದರ್ಭಿಕ ಚಿತ್ರ
ಮೂಡುಬಿದಿರೆ, ನ.29: ಶಿವರಾಜ್ ಶೆಟ್ಟಿ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಕಾಂಜಾರು ಗ್ರಾಮದ ಪರಾರಿ ಮನೆಯ ನಿವಾಸಿಗಳಾದ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಕಾಂಜಾರು ಗ್ರಾಮದ ಜಯಾನಂದ ಹೆಗ್ಡೆ, ಪಿ.ಮಂಜುನಂದ ಹೆಗ್ಡೆ ಹಾಗೂ ಚಂದ್ರಹಾಸ ಹೆಗ್ಡೆ ಜಾಮೀನು ಪಡೆದುಕೊಂಡವರು ಎಂದು ತಿಳಿದು ಬಂದಿದೆ.
ಈ ಮೂವರು ಆರೋಪಿಗಳು ಶಿವರಾಜ್ ಶೆಟ್ಟಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರವಾಗಿ ವಕೀಲ ಮೂಡುಬಿದಿರೆಯ ಶರತ್ ಶೆಟ್ಟಿ ಡಿ. ಎಂಬವರು ಉಡುಪಿಯ 2ನೇ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ