×
Ad

ಮೂಡುಬಿದಿರೆ: ಮಹಿಳೆಯ ಕುತ್ತಿಗೆಯಿಂದ ಸರ ಅಪಹರಣ

Update: 2024-09-02 17:51 IST

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಮಾರ್ನಾಡು ಬಸದಿ ಬಳಿ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಸುಮಾರು ಒಂದುವರೆ ಲಕ್ಷ ರೂ. ಮೌಲ್ಯದ ಚೈನನ್ನು ಇಬ್ಬರು ಎಗರಿಸಿ ಪರಾರಿಯಾಗಿದ್ದಾರೆ.

ಇಂದು ಮಧ್ಯಾಹ್ನದ ಸುಮಾರಿಗೆ ಮಾರ್ನಾಡು ವರ್ಧಮಾನ ಸ್ವಾಮಿ ಬಸದಿಯ ಮುಂಭಾಗದಿಂದ ಸುಮಾರು 82 ವರ್ಷ ಪ್ರಾಯದ ಮಹಿಳೆಯೋರ್ವರು ಮನೆಯ ಎದುರಿರುವ ಅಂಗಡಿಯಿಂದ ಹಾಲು ತರುತ್ತಿದ್ದಾಗ ಘಟನೆ ನಡೆದಿದೆ.

ಇಬ್ಬರು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಸಹಿತ ರೈನ್ ಕೋಟ್ ಧರಿಸಿ ಬಂದು ಮಹಿಳೆಯಲ್ಲಿ ದಾರಿ ಕೇಳುವಂತೆ ನಟಿಸಿ ಚೈನನ್ನು ಎಗರಿಸಿದ್ದಾರೆ. ಮಾರ್ನಾಡು ಕಡೆಯಿಂದ ಆಗಮಿಸಿದ ಆರೋಪಿಗಳು ನಂತರ ತಂಡ್ರಕೆರೆ ಕಡೆಗೆ ಸಾಗಿರುವುದಾಗಿ ತಿಳಿಸಿದ್ದಾರೆ.

ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದ್ದು ಪರಿಸರದ ಸಿಸಿಟಿವಿ ದಾಖಲಾತಿಗಳನ್ನು ಪರೀಕ್ಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News