×
Ad

ಮೂಡುಬಿದಿರೆ | ರೋಟರಿ ಸಂಭ್ರಮ 2025: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

Update: 2025-11-30 19:19 IST

ಮೂಡುಬಿದಿರೆ : ರೋಟರಿ ಕ್ಲಬ್‌ನ ಸಾಂಸ್ಕೃತಿಕ ಚಟುವಟಿಕೆಗಳು ಭಾಂಧವ್ಯವನ್ನು ಸಮೃದ್ಧಗೊಳಿಸುತ್ತದೆ. ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕೆಲಸ ರೋಟರಿಯ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್‌ನಂತ ಯುವ ಕ್ಲಬ್‌ಗಳಿಂದಾಗುತ್ತಿರುವುದು ಶ್ಲಾಘನೀಯ. ಕ್ಲಬ್ ಸ್ಥಾಪನೆ ಹೇಗೆ ಮುಖ್ಯವಾಗುತ್ತದೋ ಅದೇ ರೀತಿಯಲ್ಲಿ ಅದನ್ನು ಸಮರ್ಥವಾಗಿ ಮುನ್ನಡೆಸುವುದು ಕೂಡ ಮುಖ್ಯ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಹೇಳಿದರು.

ಅವರು ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್‌ಟೌನ್ ಆಶ್ರಯದಲ್ಲಿ ರೋಟರಿ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ರೋಟರಿ ಸಂಭ್ರಮ 2025-ಜಿಲ್ಲಾ ಮಟ್ಟದ ಸಾಂಸ್ಕೃತಿಗೆ ಸ್ಪರ್ಧೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

4ರ ಸಹಾಯಕ ಗವರ್ನರ್ ಡಾ. ರಾಜಾರಾಂ ಕೆ.ವಿ ಮುಖ್ಯ ಅತಿಥಿಯಾಗಿದ್ದು, ಸಾಮಾಜಿಕ ಚಿಂತನೆಯೊಂದಿಗೆ ರೋಟರಿ ಸಂಸ್ಥೆ ಶಿಕ್ಷಣ, ಸಂಸ್ಕೃತಿ, ಕ್ರೀಡೆಯಲ್ಲೂ ಸೇವೆ ಸಲ್ಲಿಸುತ್ತಿದೆ ಎಂದರು.

ಕಾರ್ಯಕ್ರಮ ವಿಭಾಗದ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕೆ., ಜಿಲ್ಲಾ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಪ್ರವೀಣ್ ಪಿರೇರಾ, ವಲಯ 4ರ ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರ್, ರೋಟರಿ ಶಿಕ್ಷಣ ಸಂಸ್ಥೆ ನಾರಾಯಣ ಪಿ.ಎಂ.,ಸಹಾಯಕ ಗವರ್ನರ್‌ಗಳಾದ ಡಾ. ಎ. ಜಯಕುಮಾರ್ ಶೆಟ್ಟಿ, ಕೆ. ಪದ್ಮನಾಭ ರೈ, ವಲಯ ಲೆಫ್ಟಿನೆಂಟ್ ಸಿ.ಎಚ್. ಅಬ್ದುಲ್ ಗಫೂರ್, ಉದ್ಯಮಿ ಪ್ರಭಾತ್‌ಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು.

ಕ್ಲಬ್‌ನ ಅಧ್ಯಕ್ಷ ಹರೀಶ್ ಎಂ.ಕೆ, ಕಾರ್ಯದರ್ಶಿ ಭರತ್ ಶೆಟ್ಟಿ, ಸಾಂಸ್ಕೃತಿಕ ಸಂಯೋಜಕ ಡಾ.ಮಹಾವೀರ ಜೈನ್ ಉಪಸ್ಥಿತರಿದ್ದರು.

ಸರಿತಾ ಹರೀಶ್, ಡಾ.ಪ್ರಣಮ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News