×
Ad

ಮೂಡುಬಿದಿರೆ: ವಿಶಾಲ್ ಟೂರಿಸ್ಟ್ ಬಸ್ ಪಲ್ಟಿ; ಹಲವು ಮಂದಿಗೆ ಗಾಯ

Update: 2023-08-25 23:47 IST

ಮೂಡುಬಿದಿರೆ: ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ‌ ಶುಕ್ರವಾರ ರಾತ್ರಿ ವಿಶಾಲ್ ಟೂರಿಸ್ಟ್ ಬಸ್ ಪಲ್ಟಿಯಾಗಿ ಹಲವು ಮಂದಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಸ್ಸು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಆಗಿದ್ದು, ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ, ಗಾಂಧೀನಗರದ ನಡುವೆ ಅಪಘಾತಕ್ಕೀಡಾಗಿದೆ. ಒಟ್ಟು 27 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಊರವರು ಜಮಾಯಿಸಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಸೇವೆಯ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News