×
Ad

ಮೂಡುಬಿದಿರೆ:‌ ಈಜು ಸ್ಪರ್ಧೆಯಲ್ಲಿ ಪ್ರೇರಣಾ ಶಾಲೆಯ ಪ್ರೀತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2025-11-24 15:28 IST

 ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯ ಮಟ್ಟದಲ್ಲಿ ಸಮಗ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 4 x 100 ಮೀಟರ್ ರಿಲೇ: ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿಂದೆ ಅವರು 400 ಮೀಟರ್ ಫ್ರೀ ಸ್ಟೈಲ್- ದ್ವಿತೀಯ ಸ್ಥಾನ, 400 ಮೀಟರ್ ಫ್ರೀ ಸ್ಟೈಲ್- ಪ್ರಥಮ ಸ್ಥಾನ, 100 ಮೀಟರ್ ಫ್ರೀ ಸ್ಟೈಲ್: ದ್ವಿತೀಯ ಸ್ಥಾನ ಹಾಗೂ 50 ಮೀಟರ್ ಫ್ರೀ ಸ್ಟೈಲ್ -ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಸಾಧನೆ ಮಾಡಿದ್ದರು. ವಿದ್ಯಾಭಾರತಿ ಈಜು ಸ್ಪರ್ಧೆಯ ರಾಜ್ಯಮಟ್ಟದಲ್ಲಿ 100 ಮೀಟರ್ ಫ್ರೀ ಸ್ಟೈಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕ್ರೀಡೆಯಲ್ಲಿ ಬಹುಮುಖ ಪ್ರತಿಭೆ ಹೊಂದಿರುವ ಈಕೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರೀತಿ ಮೂಡುಬಿದಿರೆ ಈಜು ಕೊಳ ಸಂಕೀರ್ಣದ ಉದ್ಯೋಗಿ ಬಸವರಾಜಾ- ಎಲ್ಲಿಜಮ್ಮ ದಂಪತಿಯ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News