×
Ad

ಮೂಡುಬಿದಿರೆ: ಹೇರ್ ಕಟ್ಟಿಂಗ್ ಶಾಪ್‌ನಲ್ಲಿ ಕಳವು ಪ್ರಕರಣ; ಆರೋಪಿ ಸೆರೆ

Update: 2024-01-24 20:05 IST

ಮಂಗಳೂರು: ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ಗಣೇಶ್ ಭಂಡಾರಿ ಎಂಬವರಿಗೆ ಸೇರಿದ ಹೇರ್ ಕಟ್ಟಿಂಗ್ ಶಾಪಿಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆ ಪುಚ್ಚನೊಗರು ಗ್ರಾಮದ ಮಿತ್ತಬೈಲ್‌ನ ಹರೀಶ್ ಪೂಜಾರಿ (46) ಬಂಧಿತ ಆರೋಪಿ.

ಜ.8ರಂದು ರಾತ್ರಿ 10.15ರಿಂದ ಜ.10ರ ಬೆಳಗ್ಗೆ 7.15 ಗಂಟೆಯ ಅವಧಿಯಲ್ಲಿ ಗಣೇಶ್ ಭಂಡಾರಿ ಅಂಗಡಿಯ ಹಿಂದಿನ ಗೋಡೆಯನ್ನು ಕಿಂಡಿಯ ರೀತಿಯಲ್ಲಿ ಹೊಡೆದು ಅಂಗಡಿಯ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಟಿವಿ ಹಾಗೂ ನಗದು ಹಣವನ್ನು ಎಗರಿಸಿಕೊಂಡು ಪರಾರಿಯಾಗಿರುವ ಬಗ್ಗೆ ಮೂಡುಬಿದಿರೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಹರೀಶ್ ಪೂಜಾರಿಯನ್ನು ಬಂಧಿಸಿ ಕಳ್ಳತನಕ್ಕೆ ಉಪಯೋಗಿಸಿದ್ದ ಆಕ್ಟಿವಾ ಸ್ಕೂಟರ್ ಹಾಗೂ ಸುಮಾರು 50,000 ರೂ ಮೌಲ್ಯದ ಟಿವಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 1,50,000 ಎಂದು ತಿಳಿದು ಬಂದಿದೆ.

ಆರೋಪಿಯ ವಿರುದ್ಧ ಈ ಮೊದಲು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ, 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ 5 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿದ್ದು ಹಾಗೂ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News