ಮಂಗಳೂರು| ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ : ಚಾಲಕ ಅಪಾಯದಿಂದ ಪಾರು
ಮಂಗಳೂರು: ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಕಾವೂರು ಮಹಾಲಿಂಗೇಶ್ವರ ದೇವಸ್ಥ್ಥಾನದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಕಾವೂರು ಕಡೆಯಿಂದ ಕೊಂಚಾಡಿ ಕಡೆಗೆ ತರೆಳುತ್ತಿದ್ದ ಕಾರ್‌ನ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಾಲಕ ಸೂಜಿಗುಡ್ಡೆ ನಿವಾಸಿ ಶಿವಾನಂದ ಎಂಬವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾರೆ. ಅಷ್ಟು ಹೊತ್ತಿಗೆ ಏಕಾ ಏಕಿ ಬೆಂಕಿ ಹತ್ತಿ ಕೊಂಡಿದೆ. ತಕ್ಷಣ ಕದ್ರಿ ಅಗ್ನಿ ಶಾಮಕ ಠಾಣೆ ಕರೆ ಮಾಡಿದ್ದು, ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರಾದರೂ, ಆ ವೇಳೆಗಾಗಲೇ ಕಾರು ಬಹುತೇಕ ಬೆಂಕಿಗೆ ಆಹುತಿಯಾಗಿತ್ತು.
2008 ಮಾದರಿಯ ವೂಕ್ಸ್ ವ್ಯಾಗನ್ ಕಂಪೆನಿಗೆ ಸೇರಿದ ಕಾರಾಗಿದ್ದು, ಸೂಜಿಗುಡ್ಡೆ ನಿವಾಸಿ ಶಿವಾನಂದ ಎಂಬವರು ಚಲಾಯಿಸುತ್ತಿದ್ದರು. ಕಾರಿನಲ್ಲಿ ಚಾಲಕ ಮಾತ್ರ ಇದ್ದರು ಎಂದು ತಿಳಿದು ಬಂದಿದೆ. ಸುಮಾರು 4-5 ಲಕ್ಷ ರೂ. ನಷ್ಟ ಸಂಭವಿರಬಹುದು ಎಂದು ಅಂದಾಜಿಸಲಾಗಿದೆ.