×
Ad

ಮುಡಿಪು: ಪ್ರಥಮ ದರ್ಜೆ ಕಾಲೇಜು ಪೂರ್ವಭಾವಿ ಸಿದ್ಧತಾ ಸಭೆ

Update: 2023-10-19 14:51 IST

ಮುಡಿಪು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇದರ ಆಶ್ರಯದಲ್ಲಿ ನಡೆಯುವ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷ‌ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯ ಕೂಟದ ಆಯೋಜನೆಯ ಪೂರ್ವಭಾವಿ ಸಿದ್ಧತಾ ಸಭೆ ಮುಡಿಪು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಡಿಪು ಕಾಲೇಜು ವತಿಯಿಂದ ನಡೆಯುವ ‌ಕಬಡ್ಡಿ ಪಂದ್ಯಾಟಕ್ಕೆ ಎಲ್ಲರೂ ಸಹಕಾರ ನೀಡಿ ಸಹಕರಿಸಬೇಕು.ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ದಲ್ಲಿ ಸಂತೋಷ್ ಕುಮಾರ್ ಬೋಳಿಯಾರ್, ನಿವೃತ್ತ ಶಿಕ್ಷಕ ಶೀನ ಶೆಟ್ಟಿ, ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಯಂತಿ ಶೇಟ್, ಇಬ್ರಾಹಿಂ ನಡುಪದವು,ಡಾ.ಸುರೇಖ ಶೆಟ್ಟಿ,ಅನಿಲ್ ಇರಾ,ಭರತ್ ನಾಯಕ್, ಸೀತಾರಾಮ ಶೆಟ್ಟಿ,ಕೆ.ಕೆ.ನಾಸೀರ್, ನಾಸೀರ್ ಎನ್ ಎಸ್, ಸುಕನ್ಯಾ ಶೆಟ್ಟಿ, ನವಾಝ್ ನರಿಂಗಾನ, ಶರೀಫ್ ಪಟ್ಟೋರಿ, ಯೋಗೀಶ್ ಆಚಾರ್ಯ, ರಾಜೇಶ್ ಶೆಟ್ಟಿ, ರಾಧಾಕೃಷ್ಣ ಉದ್ಯಮಿ, ಮಹೇಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News