×
Ad

ಮುಡಿಪು: ಸಹಪಾಠಿಯ ಜೀವ ರಕ್ಷಿಸಿದ ವಿದ್ಯಾರ್ಥಿನಿಗೆ ಸನ್ಮಾನ

Update: 2024-06-25 09:27 IST

ಬಂಟ್ವಾಳ: ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಬಾಲಕಿಯನ್ನು ರಕ್ಷಿಸಿದ್ದ ಫಾತಿಮತುಲ್ ಅಶ್ಫಿಯಾಳನ್ನು ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ವತಿಯಿಂದ ಸನ್ಮಾನಿಸಲಾಯಿತು.

ಇರಾ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಫಾತಿಮತುಲ್ ಅಶ್ಫಿಯಾ ತನ್ನ ಶಾಲೆಯಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಬಾಲಕಿಯನ್ನು ರಕ್ಷಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಳು. ಈಕೆ ಮುಡಿಪು ಇರಾ ಗ್ರಾಮದ ಮುಜೀಬುರ್ರಹ್ಮಾನ್ ‌ಅವರ ಪುತ್ರಿ

ಅಶ್ಫಿಯಾಳ ಸಾಹಸವನ್ನು ಮೆಚ್ಚಿ ಭಾರತ್ ಫ್ರೆಂಡ್ಸ್ ಕ್ಲಬ್ ಸದಸ್ಯರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು. ತನ್ನ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ಕಾಪಾಡಿದ ಹೆಣ್ಣುಮಗಳ ಕಾರ್ಯವನ್ನು ಪ್ರಸಂಶಿಸಿದ ಕ್ಲಬ್ ಸದಸ್ಯರು ಮುಂದಿನ ಜೀವನ ಉಜ್ವಲವಾಗಿರಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಮೇಗಿನಬೈಲು,ಗೌರವ ಅಧ್ಯಕ್ಷರಾದ ರಾಜಶೇಖರ ರೈ ಇರಾ ಗುತ್ತು ,ನಿವೃತ್ತ ಎ.ಎಸ್.ಐ ಅಬ್ಬಾಸ್ ಬ್ಯಾರಿ, ಊರಿನ ಹಿರಿಯರಾದ ವಾಮನ ಪೂಜಾರಿ ತಾಳಿತ್ತಬೆಟ್ಟು, ಸುರೇಶ್ ಕೊಟ್ಟಾರಿ ಇರಾ, ಹಾಗೂ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News