×
Ad

ಮುಡಿಪು | ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮುಡಿಪು ರೀಜಿನಲ್ ಸಮಿತಿ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ

Update: 2025-04-29 10:50 IST

ಮುಡಿಪು : ಮುಡಿಪು ರೀಜಿನಲ್ ವ್ಯಾಪ್ತಿಯಿಂದ ಪವಿತ್ರ ಹಜ್ಜ್ ಯಾತ್ರೆಗೈಯ್ಯುವ ಹಾಜಿಗಳಾದ ಅಬೂಬಕರ್ ಮದನಿ ತೋಟಾಲ್ ,ಅಬ್ದುಲ್ ರಹ್ಮಾನ್ ಸಅದಿ ಸಂಬಾರತೋಟ, ಮುಹಮ್ಮದ್ ಮುಸ್ಲಿಯಾರ್ ಸಂಪಿಲ, ಅಸ್ಲಂ ಸಂಪಿಲ, ಉಮರ್ ಪರಪ್ಪು, ಅಬ್ದುಲ್ ಹಮೀದ್ ಪರಪ್ಪು, ಅಬ್ದುಲ್ಲಾ ಪರಪ್ಪು, ಅಬೂಬಕರ್ ಪರಪ್ಪು, ಮೋನುಚ್ಚ ಸಂಪಿಲ ಮೊದಲಾದವರಿಗೆ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮುಡಿಪು ರೀಜಿನಲ್ ಸಮಿತಿ ವತಿಯಿಂದ ಇಲ್ಲಿನ ಎಜ್ಯು ಪಾರ್ಕ್ ಹಾಲಿನಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.

ಮುಡಿಪು ರೀಜಿನಲ್ ಅಧ್ಯಕ್ಷರಾದ ಯುಕೆ ಹಸೈನಾರ್ ಹಾಜಿ ಪರಪ್ಪು ಅಧ್ಯಕ್ಷತೆ ವಹಿಸಿದ್ದರು. ಎಸ್ ಜೆಎಂ ದ.ಕ. ಸೌತ್ ಜಿಲ್ಲಾ ಅಧ್ಯಕ್ಷರಾದ ಯಾಕೂಬ್ ಲತೀಫೀಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮುಡಿಪು ರೇಂಜ್ ಅಧ್ಯಕ್ಷರಾದ ಮೊಯ್ದಿನ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು.

ರೀಜಿನಲ್ ಕೋಶಾಧಿಕಾರಿ ಅಬೂಬಕರ್ ಹಾಜಿ ಮಧ್ಯನಡ್ಕ, ಅಬೂಬಕರ್ ಮದನಿ ಮುದುಂಗಾರುಕಟ್ಟೆ, ಎಸ್‌.ಎಸ್‌.ಮೂಸಾ ಹಾಜಿ, ಕ್ಯಾಬಿನೆಟ್ ನಾಯಕರಾದ ಹಬೀಬುರಹ್ಮಾನ್ ಸಂಪಿಲ, ಎಂಎಂಕೆ ರಶಾದಿ ಮುಡಿಪು ಮೊದಲಾದವರು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News