×
Ad

ಮುಡಿಪು: ಯುವತಿ ನಾಪತ್ತೆ

Update: 2025-07-31 22:23 IST

ಕೊಣಾಜೆ : ಕೊಣಾಜೆ‌ ಠಾಣಾ‌ ವ್ಯಾಪ್ತಿಯ ಮಹಿಳಾ ಆಶ್ರಯ ಕೇಂದ್ರದಲ್ಲಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಒಡಿಷಾ ಮೂಲದ ತ್ರಿಶಾ (22) ಎಂಬಾಕೆಯೇ ನಾಪತ್ತೆಯಾದ ಯುವತಿಯಾಗಿದ್ದು, ಈಕೆ ಜುಲೈ 30ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾಪತ್ತೆಯಾಗಿದ್ದಾಳೆ.

ಕಳೆದ‌ ವರ್ಷ ತ್ರಿಶಾ ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದಳು ಎನ್ನಲಾಗಿದ್ದು‌ ಬಳಿಕ , ಇತ್ತೀಚೆಗೆ ಮಡಿಪುವಿನ ಪ್ರಜ್ಞಾ ಆಶ್ರಯ ಮಂದಿರದಲ್ಲಿ ವಾಸವಾಗಿದ್ದಳು. ಈಕೆ ಜುಲೈ 30 ರಂದು ರಾತ್ರಿ ಅಡುಗೆ ಕೋಣೆಯ ಬಾಗಿಲು ತೆರೆದು ಕೌಂಪೌಂಡು ಹಾರಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಕಾಣೆಯಾಗಿರುವ ಈಕೆಯ ಬಗ್ಗೆ ಪ್ರಜ್ಞಾ ಸ್ವಧಾರಾ ಕೇಂದ್ರದ ಅಧೀಕ್ಷಕಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News