×
Ad

ಕ.ಸಾ.ಪ ಪರೀಕ್ಷೆಯಲ್ಲಿ ಮೂಡುಬಿದಿರೆ ಅಳ್ವಾಸ್ ಕೇಂದ್ರದ ದಾಖಲೆ ಫಲಿತಾಂಶ

Update: 2024-03-12 14:08 IST

2023-24ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಪರೀಕ್ಷಾ ಕೇಂದ್ರವು ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸಿದೆ.

ಪ್ರವೇಶ ಪರೀಕ್ಷೆಯಲ್ಲಿ ತನ್ವೀರ್ ಮ. ಮುಜಾವರ ದ್ವಿತೀಯ ಮತ್ತು ಕೀರ್ತಿ ಗಿರಿಮಲ್ಲಪ್ಪ ಬೆಳಗಲಿ ತೃತೀಯ, ಜಾಣ ಪರೀಕ್ಷೆಯಲ್ಲಿ ವಿಶ್ವನಾಥ ರಾಮಪ್ಪ ಕಟ್ಟಿಕಾರ ಪ್ರಥಮ, ಗೋಪಾಲ ಪರಮಾನಂದ ತೋರಗಲ್ಲ ದ್ವಿತೀಯ, ಕಾರ್ತಿಕ್ ಶಾಂತಿನಾಥ ಶೇಖನ್ನವರ ತೃತೀಯ ರ‍್ಯಾಂಕ್‌ ಹಾಗೂ ರತ್ನ ಪರೀಕ್ಷೆಯಲ್ಲಿ ಪ್ರಶಾಂತ ಎಸ್. ದ್ವಿತೀಯ ರ್ಯಾಂಕ್ ಪಡೆದು ಕನ್ನಡದ ಮೇಲಿನ ಅಭಿಮಾನ ಮೆರೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ ಮುಕ್ತಕಂಠದಿಂದ ಪ್ರಶಂಸಿದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕವು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News