×
Ad

ಮುದುಂಗಾರುಕಟ್ಟೆ: ಎಸ್ಸೆಸ್ಸೆಫ್ ವತಿಯಿಂದ ಉಚಿತ ವೈದ್ಯಕೀಯ , ಕಣ್ಣಿನ ತಪಾಸಣಾ ಶಿಬಿರ

Update: 2025-11-30 12:56 IST

ಮುಡಿಪು: ಸುನ್ನಿ ಸೂಡೆಂಟ್ಸ್ ಫೆಡರೇಶನ್ ಮುದುಂಗಾರುಕಟ್ಟೆ ಯೂನಿಟ್ ಇದರ ಆಶ್ರಯದಲ್ಲಿ ಮಾಸಿಕ ಬುರ್ದಾ ಮಜ್ಜಿಸ್ ಬೆಳ್ಳಿಹಬ್ಬದ ಅಂಗವಾಗಿ ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು , ಪ್ರಸಾದ್ ನೇತ್ರಾಲಯ ಇವುಗಳ ಸಹಯೋಗದೊಂದಿಗೆ ಭಾನುವಾರ ಮುದುಂಗಾರುಕಟ್ಟೆ ಮಸೀದಿ ವಠಾರದಲ್ಲಿಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ , ಆಧಾರ್ ಕಾರ್ಡ್, ಕಾರ್ಮಿಕರ ಕಾರ್ಡ್ ನೋಂದಣಿ ಶಿಬಿರ ನಡೆಯಿತು.

ಮುದುಂಗಾರುಕಟ್ಟೆ ಖತೀಬ್ ಅಬ್ದುಲ್ ರಹ್ಮಾನ್ ಸಖಾಫಿ ದುಆ ನೆರವೇರಿಸಿದರು. ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಯು.ಎಮ್.ಕಾರ್ಯಕ್ರಮರ ಅಧ್ಯಕ್ಷತೆ ವಹಿಸಿದ್ದರು.

ಸಿರಾಜುದ್ದೀನ್ ಸಖಾಫಿ ಕನ್ಯಾನ, ಯುಕೆ ಅಬೂಬಕ್ಕರ್ ಮದನಿ, ರಮೇಶ್ ಶೇಣವ ಸಂದರ್ಭೋಚಿತವಾಗಿ ಮಾತನಾಡಿದರು

ಈ ಕಾರ್ಯಕ್ರಮ ದಲ್ಲಿ ಮಂಜು ಭಂಡಾರಿ ಯಾನೆ ಪದ್ಮನಾಭ ರೈ, ರಂಗನಾಥ ಕೊಂಡೆ, ವಾಸುದೇವ ಭಟ್, ಝಕರಿಯಾ ಸಖಾಫಿ, ಯುಕೆ ಅಬೂಬಕ್ಕರ್ ಮದನಿ, ಯು.ಕೆ.ಅಬೂಬಕರ್ , ಹನೀಫ್ ಹಿಮಮಿ, ಅಬ್ದುಲ್ ರಝಾಕ್ ರಝಾದಿ ಗುರುರಾಜ್ ಭಟ್, ನಾಸೀರ್ ನಡುಪದವು, ಎಸ್ . ಕೆ. ಅಬ್ದುಲ್ ಖಾದರ್ ಹಾಜಿ, ಗ್ರಾ.ಪಂ.ಉಪಾಧ್ಯಕ್ಷ ಸಿ.ಎಮ್ ಶರೀಫ್, ಅಬ್ದುಲ್ ರಝಾಕ್ ಯೆನೆಪೋಯ, ಸುಧೀರ್ ಬಾಳೆಪುಣಿ, ಹೈದರ್ ಕೈರಂಗಳ, ಪಿಡಿಒ ವೆಂಕಟೇಶ್, ಉದ್ಯಮಿ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು

ಜಮಾಲುದ್ದೀನ್ ಸಖಾಫಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News