×
Ad

ಮುಲ್ಕಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

Update: 2026-01-04 21:27 IST

ಮುಲ್ಕಿ: ಪ್ರಕರಣವೊಂದರಲ್ಲಿ ಭಾಗಿಯಾಗಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ಕೊಲ್ನಾಡು ಕೆ.ಎಸ್. ರಾವ್‌ ನಗರ ನಿವಾಸಿ ಪ್ರಹ್ಲಾದ್ (19) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಹ್ಲಾದ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 78/2023ರಲ್ಲಿ ಕಲಂ 306, 34ಐಪಿಸಿಗಳಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಯ ಬಂಧನಕ್ಕಾಗಿ ನ್ಯಾಯಾಲಯವು ಹಲವು ಬಾರಿ ದಸ್ತಗಿರಿಯ ವಾರೆಂಟ್‌ ಹೊರಡಿಸಿತ್ತು. ಆದರೆ ಎರಡು ವರ್ಷಗಳಿಂದ ಆರೋಪಿಯು ತಲೆ ಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ‌ ನ್ಯಾಯಾಂಗ ಬಂಧನ‌ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News