×
Ad

ಮುಲ್ಕಿ: ವಂಚನೆ ಪ್ರಕರಣ; ಆರೋಪಿ ಸೆರೆ

Update: 2024-11-24 23:29 IST

ಮುಲ್ಕಿ: ಡಿಜಿಟಲ್ ಅರೆಸ್ಟ್ ಎಂದು ನಂಬಿಸಿ ಲಕ್ಷಾಂತರ ರೂ. ತಮ್ಮ ಖಾತೆಗೆ ವರ್ಗಾಹಿಸಿಕೊಂಡ ಪ್ರಕರಣದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಅಲಪುಝು, ಪಲ್ಲತುರುತಿ ನಿವಾಸಿ ಜುನೈತ್ (26) ಎಂದು ಗುರುತಿಸಲಾಗಿದೆ

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಆಶಿಕ್ ಟಿ.ಹೆಚ್. ಎಂಬವರನ್ನು ಮೇ 6 ರಿಂದ7 ರವರೆಗೆ ಮೊಬೈಲ್ ನಲ್ಲಿ ವಿಡಿಯೋ ಕರೆ ಮೂಲಕ ಡಿಜಿಟಲ್ ಅರೆಸ್ಟ್ ಎಂದು ನಂಬಿಸಿ ಫೆಡೆಕ್ಸ್ ಕಂಪನಿಯವರಿಗೆ ತನ್ನ ಹೆಸರಿನಲ್ಲಿ ಕಳುಹಿಸಿದ ಪಾರ್ಸಲ್ ನಲ್ಲಿ ಮಾದಕ ವಸ್ತುಗಳು ಮತ್ತು ಇತರ ಸೊತ್ತುಗಳು ಇದೆ ತಿಳಿಸಿ ಈ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ನವರು ತನಿಖೆ ನಡೆಸುವುದಾಗಿ ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಬ್ಯಾಂಕ್ ಆಕೌಂಟ್ ಗಳ ಮಾಹಿತಿ ಪಡೆದು ಆಶಿಕ್ ಅವರ ಬ್ಯಾಂಕ್ ಅಕೌಂಟ್ ನಿಂದ 2,19,972 ರೂ ಹಣವನ್ನು ತಮ್ಮ ಖಾತೆಗೆ ವರ್ಗಾಹಿಸಿ ಸೈಬರ್ ವಂಚನೆ ಮಾಡಿರುವ ಬಗ್ಗೆ ಮೇ 18ರಂದು ಮುಲ್ಕಿ ಠಾಣೆಯಲ್ಲಿ ಆಶಿಕ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ ಬಾಯ್ಕರಿಕರ್ ಮತ್ತು ಪಿ.ಎಸ್.ಐ. ಅನಿತಾ ಹೆಚ್.ಬಿ ಹಾಗೂ ಸಿಬ್ಬಂದಿ ವಿವಿಧ ತಾಂತ್ರಿಕ ಮಾಹಿತಿ ಮತ್ತು ದಾಖಲಾತಿಗಳ ಆಧಾರದಲ್ಲಿ ಆರೋಪಿಗಳ ಮಾಹಿತಿ ಸಂಗ್ರಹಿಸಿ ಜುನೈತ್ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News