×
Ad

ಕಾಜೂರು : 1.5 ಕೋಟಿ ರೂ. ವೆಚ್ಚದ ಮುಸಾಫಿರ್ ಖಾನಾ ಕಟ್ಟಡ ಉದ್ಘಾಟನೆ

Update: 2025-01-31 19:28 IST

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ಶ್ರದ್ಧಾ ಕೇಂದ್ರ ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಜ.30ರಂದು ಸರಕಾರದ 1.5 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಮುಸಾಫಿರ್ ಖಾನಾ (ಯಾತ್ರಿ ನಿವಾಸ) ಕಟ್ಟಡವನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಶೈಖುನಾ ಸುಲ್ತಾನುಲ್ ಉಲಮಾ ಕಾಂದಪುರಂ ಎ.ಪಿ.ಅಬೂಬಕರ್ ಅಹ್ಮದ್ ಉಸ್ತಾದ್ ಉದ್ಘಾಟಿಸಿದರು.

ರಾಜ್ಯ ವಕ್ಫ್ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಮೌಲಾನಾ ಎನ್.ಕೆ.ಎ.ಶಾಫಿ ಸಅದಿ ಮತ್ತು ಝೈನುಲ್ ಆಬಿದೀನ್ ಕಾಜೂರು ತಂಙಳ್ ಆಶಯ ಭಾಷಣ ಮಾಡಿದರು. ರಾಜ್ಯ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಕೆ.ಸಿ.ರೋಡ್ ಹುಸೈನ್ ಸಅದಿ ಮುಖ್ಯ ಭಾಷಣ ನಡೆಸಿಕೊಟ್ಟರು. ಸೈಯದ್ ಮುಖ್ತಾರ್ ತಂಙಳ್ ನೇತೃತ್ವದಲ್ಲಿ ದಿಕ್ರ್ ಹಲ್ಕಾ ಮಜ್ಲಿಸ್ ಮತ್ತು ದುಆ ನಡೆಯಿತು. ಸೈಯದ್ ಪಝಲ್ ಜಮಲುಲ್ಲೈಲಿ ತಂಙಳ್ ವಾದಿ ಇರ್ಫಾನ್ ಉದ್ಘಾಟಿಸಿದರು.

ವೇದಿಕೆಯಲ್ಲಿ ಕೇಂದ್ರ ಮುಶಾವರ ಸದಸ್ಯ ಅಬೂಸ್ವಾಲಿಹ್ ಮದನಿ ಕಿಲ್ಲೂರು, ಕೆ.ಯು.ಉಮರ್ ಸಖಾಫಿ ಕಾಜೂರು, ಸೈಯದ್ ಎಸ್.ಎಂ.ಕೋಯ ಉಜಿರೆ, ಸೈಐದ್ ಗುಲ್ರೇಝ್ ಅಹ್ಮದ್ ರಝ್ವಿ ಬೆಳ್ತಂಗಡಿ, ಡಾ.ಎಂ.ಎಸ್.ಎ.ಝೈನಿ ಕಾಮಿಲ್ ಸಖಾಫಿ, ಮುಹಮ್ಮದ್ ತೌಸೀಫ್ ಸಅದಿ ಹರೇಕಳ, ಪರಪ್ಪು ಶಂಶೀರ್ ಸಖಾಫಿ ಕಿಲ್ಲೂರು, ಯು.ಕೆ.ಮುಹಮ್ಮದ್ ಹನೀಫ್ ಉಜಿರೆ, ಅಬ್ಬೋನು ಮದ್ದಡ್ಕ, ಅಬ್ದುಲ್ ಕರೀಂ ಗೇರುಕಟ್ಟೆ, ಅನ್ಸಾರ್ ಲಾಯಿಲ, ಅಬ್ದುಲ್ ಲೆತೀಫ್ ಅರ್ಲಡ್ಕ, ಅಬ್ದುರ್ರಹ್ಮಾನ್ ಸಂಕೇಶ, ಸತ್ತಾರ್ ಸಾಹೇಬ್ ಬಂಗಾಡಿ, ಮುತ್ತಲಿಬ್ ಇಂದಬೆಟ್ಟು, ನಝೀರ್ ಮಠ, ಅಬ್ದುರ್ರಹ್ಮಾನ್ ಮೊಗರ್ಪಣೆ, ಸಾದಿಕ್ ಮಲೆಬೆಟ್ಟು, ಹಾಫಿಲ್ ಹನೀಫ್ ಮಿಸ್ಬಾಹಿ, ಮುಹಮ್ಮದ್ ಸಖಾಫಿ, ಇಬ್ರಾಹೀಂ ಮದನಿ, ಬಿ.ಎ.ಯೂಸುಫ್ ಶರೀಫ್, ಪಿ.ಎ.ಮುಹಮ್ಮದ್, ಅಶ್ರಫ್ ಮಾಸ್ಟರ್ ಮಾಣಿ, ಡಾ.ಇಕ್ಬಾಲ್ ಮಾಚಾರ್ ತೀರ್ಥಹಳ್ಳಿ, ಹನೀಫ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು.ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು.

ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ.ಎಚ್.ಅಬೂಬಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಂ.ಕಮಾಲ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ಕಿಲ್ಲೂರು ಕೋಶಾಧಿಕಾರಿ ಅಬೂಬಕರ್ ಮಲ್ಲಿಗೆಮನೆ ಭಾಗಿಯಾಗಿದ್ದರು.

ಎ.ಪಿ.ಉಸ್ತಾದ್ರನ್ನುಈ ಸಂದರ್ಭ ಸನ್ಮಾನಿಸಲಾಯಿತು. ಅನುದಾನ ಒದಗಿಸಿಕೊಟ್ಟ ಶಾಫಿ ಸಅದಿ ಬೆಂಗಳೂರು ಮತ್ತು ಕಟ್ಟಡದ ಗುತ್ತಿಗೆದಾರ ವಝೀರ್ ಬಂಗಾಡಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸ್ಮಾರ್ಟ್ ಎಕ್ಸಾಂನಲ್ಲಿ ಸ್ಥಾನ ಪಡೆದ ಕಾಜೂರು ಮದ್ರಸದ ಇಬ್ಬರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಹಿರಿಯ ಪತ್ರಕರ್ತ ಅಶ್ರಫ್ ಅಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಎಚ್.ಅಬೂಬಕರ್ ಸಿದ್ದೀಕ್ ಕಾಜೂರು ವಂದಿಸಿದರು.

ಚಿತ್ರ ಶಿರ್ಷಿಕೆ: ಖಾಝಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ಅವರಿಗೆ ವಿಶೇಷ ನಿಲುವಂಗಿ ತೊಡಿಸಿ ಸನ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News