×
Ad

ವಕ್ಫ್ ತಿದ್ದುಪಡಿ ವಿರುದ್ಧ ಮುಸ್ಲಿಂ ಲೀಗ್ ಮನವಿ

Update: 2024-09-04 17:50 IST

ಮಂಗಳೂರು, ಸೆ.4: ವಕ್ಫ್ ಸೊತ್ತು ಅತೀ ಅಮೂಲ್ಯವಾಗಿದೆ. ಇದರ ತಿದ್ದುಪಡಿಗೆ ಮುಸ್ಲಿಂ ಲೀಗ್‌ನ ವಿರೋಧವಿದೆ. 2006ರಲ್ಲಿ ಜೆಪಿಸಿ ಅಧ್ಯಕ್ಷ ರಹ್ಮಾನ್ ಖಾನ್ ವಕ್ಛ್ ಸೊತ್ತು ರಕ್ಷಣಾ ವರದಿಯನ್ನು ಮಂಡಿಸಿದ್ದರು. 2013ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅನುಮೋದಿಸಿರುತ್ತಾರೆ. ಅದೇ ನಿಯಮವನ್ನು ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಯ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಮನವಿ ಸಲ್ಲಿಸಿದೆ.

ಲೀಗ್ ಜಿಲ್ಲಾಧ್ಯಕ್ಷ ಸಿ.ಅಬ್ದುರ‌್ರಹ್ಮಾನ್‌ರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಮುಖಂಡರಾದ ಶಬೀರ್ ತಲಪಾಡಿ, ಶೌಕತ್ ಅಲಿ ಜೋಕಟ್ಚೆ, ಹಾಜಿ ಅಬ್ದುರ‌್ರಹ್ಮಾನ್ ಕಂದಕ್, ಬಶೀರ್ ಉಳ್ಳಾಲ, ರಿಯಾಝ್ ಹರೇಕಳ, ಕೆ.ಸಿ. ಅಬ್ದುಲ್ ಖಾದರ್ ಕಾವೂರು, ಮುಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News