×
Ad

ನೇರಳಕಟ್ಟೆ : ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸ ಶಿಕ್ಷಕ ರಕ್ಷಕ ಸಭೆ

Update: 2025-08-13 12:35 IST

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸದ ಶಿಕ್ಷಕ - ರಕ್ಷಕರ ಸಭೆಯು ಇತ್ತೀಚೆಗೆ ಮದ್ರಸ ಹಾಲ್ ನಲ್ಲಿ ನಡೆಯಿತು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ (ಮೆಸ್ಕಾಂ) ನೇರಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ ಉದ್ಘಾಟಿಸಿದರು.

ಕೊಡಾಜೆ ಮದ್ರಸ ಮುಖ್ಯ ಶಿಕ್ಷಕ ಶಿಹಾಬುದ್ದೀನ್ ಫೈಝಿ, ಸಹ ಶಿಕ್ಷಕರಾದ ಮಕ್ಬೂಲ್ ಫೈಝಿ ಹಾಗೂ ಇಬ್ರಾಹಿಂ ಬಾತಿಷಾ ಇರ್ಫಾನಿ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ವಿವರಿಸಿದರು.

ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರಾದ ಫಾರೂಕ್ ಗೋಳಿಕಟ್ಟೆ, ಹಮೀದ್ ಪರ್ಲೊಟ್ಟು, ಇಬ್ರಾಹಿಂ ಎಸ್.ಎಂ.ಎಸ್., ಶಿಕ್ಷಕರಾದ ಅಶ್ರಫ್ ಯಮಾನಿ, ರಶೀದ್ ಅಝ್ಹರಿ, ಹಾರಿಸ್ ಮೌಲವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಪ್ರಥಮ ಕಿರು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ಹಿಬಾ ಫಾತಿಮಾ, ಆಯಿಷಾ ಸಝಾ, ನಫೀಸಾ ಮಾಹಿನ್, ಸಫಿಯಾ ಕಿಂಝಾ, ಅಶ್ಫಾನ್, ನಿಹಾಲ್ ಫಾತಿಮಾ, ಅಯಾನ್ ನೆಡ್ಯಾಲ್, ಇಬಾನ್, ಮುಹಮ್ಮದ್ ಶಿಝಾನ್, ಶಯಾಮ್, ಅರಾನ್, ಆಯಿಷಾ ಮಿರ್ಝಾ, ಸಅದಿಯಾ, ಅನ್ನಾಮ್, ಫಿಝ್ಝಾ ಇವರಿಗೆ ಬಹುಮಾನ ವಿತರಿಸಲಾಯಿತು.

ಮದ್ರಸ ಉಸ್ತುವಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.






 



 



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News