ಕಲ್ಲಾಪುವಿನಲ್ಲಿ ಉದ್ಘಾಟನೆಗೆ ಸಜ್ಜುಗೊಂಡ ನೂತನ ಚಿನ್ನದ ಮಳಿಗೆ

Update: 2024-04-29 09:27 GMT

ಉಳ್ಳಾಲ: ಕಲ್ಲಾಪು ಹೃದಯ ಭಾಗದಲ್ಲಿ ನೂತನ ಚಿನ್ನಾಭರಣ ಮಳಿಗೆಯೊಂದು ಶುಭಾರಂಭಗೊಳ್ಳಲಿದ್ದು, ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಉದ್ಯಮದಲ್ಲಿ 45 ವರ್ಷಗಳ ಅನುಭವ ಹೊಂದಿರುವ ಯುನಿಟಿ ಹಾಲ್ ಮತ್ತು ಸುಪರ್ ಗ್ರೂಪ್ ಇವುಗಳ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಮಳಿಗೆಯಲ್ಲಿ ಮದುವೆ ಇನ್ನಿತರ ಸಮಾರಂಭಗಳಿಗೆ ಬಳಕೆಗೆ ಯೋಗ್ಯ ವಾದ ನವೀನ ಮಾದರಿಯ ಚಿನ್ನ ಮತ್ತು ವಜ್ರದ ಆಭರಣಗಳು ಲಭ್ಯವಿದೆ.   ಎ. 30 ಮಂಗಳವಾರ ಒಂಭತ್ತು ಗಂಟೆಗೆ ಸ್ಥಳೀಯ ಶಾಸಕ ಹಾಗೂ ವಿಧಾನಸಭಾ ಸ್ಪೀಕರ್ ಆಗಿರುವ ಯುಟಿ ಖಾದರ್ ನೇತೃತ್ವದಲ್ಲಿ ಈ ಮಳಿಗೆ ಲೋಕಾರ್ಪಣೆಗೊಳ್ಳಲಿದೆ.

ಕಳೆದ ಒಂಭತ್ತು ವರ್ಷಗಳಿಂದ ತೊಕ್ಕೊಟ್ಟಿನ ಹೃದಯ ಭಾಗದಲ್ಲಿ ಸೇವೆಯಲ್ಲಿರುವ ದರದಲ್ಲಿ ಗ್ರಾಹಕರಿಗೆ ಬಹಳಷ್ಟು ಹತ್ತಿರವಾಗಿದ್ದ ಸುಪರ್ ಗೋಲ್ಡ್ ನ ಎರಡನೇ ಮಳಿಗೆ ಕಲ್ಲಾಪು ಹೃದಯ ಭಾಗದಲ್ಲಿ ನಿರ್ಮಾಣಗೊಂಡ ನೂತನ ಮೂರು ಅಂತಸ್ತಿನ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ. ಈ ಕಟ್ಟಡದಲ್ಲಿ ಚಿನ್ನಾಭರಣ ವೀಕ್ಷಣೆಗೆ ಹಾಗೂ ವಾಹನ ನಿಲುಗಡೆಗೆ ವಿಶಾಲವಾದ ಸ್ಥಳಾವಕಾಶ ಇದೆ.

ಚಿನ್ನ ಮತ್ತು ವಜ್ರದ ಆಭರಣಗಳ ವೀಕ್ಷಣೆ ಹಾಗೂ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಕೂಡ ಲಭಿಸಲಿದೆ. ವಧುವಿನ ವಿವಾಹ ಕಾರ್ಯಕ್ರಮಕ್ಕೆ ಆಕರ್ಷಣೆಯ ವಿವಿಧ ವಿನ್ಯಾಸಗಳ ಆಭರಣಗಳು ಯೋಗ್ಯ ದರದಲ್ಲಿ ಲಭಿಸುವ ಜೊತೆಗೆ ಗ್ರಾಹಕರಿಗೆ ಪ್ರತಿ ಗಂಟೆಗೊಮ್ಮೆ ಡ್ರಾ ಕೂಡ ನಡೆಯಲಿದೆ. ಇದರಲ್ಲಿ ವಿಜೇತರಾದವರಿಗೆ ಚಿನ್ನದ ನಾಣ್ಯ ಲಭಿಸಲಿದೆ. ಒಂದೇ ಬಾರಿ ಖರೀದಿಸಲು ಕಷ್ಟವಾಗುವ ಗ್ರಾಹಕರಿಗೆ ಸ್ಕೀಂ ಮೂಲಕ ಮಾಸಿಕ ಕಂತು ಪಾವತಿ ಮಾಡಿ ಚಿನ್ನಾಭರಣ ಖರೀದಿಸಲು ಅವಕಾಶ ಇದೆ. ಈ ರೀತಿ ಖರೀದಿ ಮಾಡುವವರಿಗೂ ಸಂಸ್ಥೆ ವತಿಯಿಂದ ರಿಯಾಯಿತಿ ಕೊಡುಗೆಗಳು ಕೂಡಾ ಲಭಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News