ಮಲಾರ್: ಉಚಿತ ಕನ್ನಡಕ ವಿತರಣೆ
ಮಂಗಳೂರು, ಡಿ.2: ಯುಟಿ ಫರೀದ್ ಫೌಂಡೇಶನ್ ಮತ್ತು ಯಾದ್ ಫೌಂಡೇಶನ್ ವತಿಯಿಂದ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಜನ್ಮದಿನ ಮತ್ತು ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವು ಪಾವೂರು ಗ್ರಾಮದ ಮಲಾರ್ನಲ್ಲಿ ಇತ್ತೀಚೆಗೆ ನಡೆಯಿತು.
ಪಾವೂರು ಗ್ರಾಪಂ ಅಧ್ಯಕ್ಷ ಮಜೀದ್ ಸಾತ್ಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಂಗಳೂರು ತಾಪಂ ಮಜಿ ಅಧ್ಯಕ್ಷ ಮುಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ, ಪಾವೂರು ಗ್ರಾಪಂ ಉಪಾಧ್ಯಕ್ಷೆ ಮೆಹರುನ್ನಿಸಾ ಬಶೀರ್, ಗ್ರಾಪಂ ಸದಸ್ಯರಾದ ರಿಯಾಝ್, ರವಿಕಲಾ, ಚೆನ್ನಮ್ಮ, ಪುಷ್ಪಾ ಭಂಡಾರಿ, ವಲೇರಿಯನ್ ಡಿಸೋಜ, ಚಂದ್ರಾವತಿ, ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಉಪಾಧ್ಯಕ್ಷ ಶರೀಫ್ ಅಕ್ಷರನಗರ, ಪ್ರಧಾನ ಕಾರ್ಯದರ್ಶಿ ಹನೀಫ್ ಕೆ.ಎಂ., ದಿನೇಶ್ ಪೂಜಾರಿ, ಝಕರಿಯ ಮಲಾರ್, ಮಾಜಿ ಸದಸ್ಯರಾದ ಚಕ್ಕರ್ ಮೋನಾಕ, ಎಂ.ಪಿ.ಹಸನ್, ಮುಹಮ್ಮದ್ ಬದ್ರಿಯಾ ನಗರ, ದುಗ್ಗಪ್ಪ ಪೂಜಾರಿ, ವಿವೇಕ್ ರೈ, ಲೀಲಾವತಿ, ಸಾದಿಕ್ ಇನೋಳಿ, ಖಾದರ್ ಇನೋಳಿ, ಲಾರೆನ್ಸ್, ಹಿರಿಯರಾದ ಉಗ್ಗಪ್ಪ ಪೂಜಾರಿ, ಶಂಕರಾನಂದ ಇನವಳ್ಳಿ, ಪುತ್ತು ಮೋನಾಕ, ಯಾದ್ ಫೌಂಡೇಶನ್ನ ಗೌರವಾಧ್ಯಕ್ಷ ಅಲ್ತಾಫ್ ಹಾಮದ್ ಮತ್ತಿತರರು ಉಪಸ್ಥಿತರಿದ್ದರು.
ಯಾದ್ ಫೌಂಡೇಶನ್ನ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.