ಪೊಯ್ಯತ್ತಬೈಲ್ ಮಣವಾಠಿ ದರ್ಗಾ ವಠಾರದಲ್ಲಿ ‘ಸಾಂಸ್ಕೃತಿಕ ಜಾಥಾ’ಕಾರ್ಯಕ್ರಮ
ಪೊಯ್ಯತ್ತಬೈಲ್: ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ ಕರ್ನಾಟಕ ಇದರ ವತಿಯಿಂದ ‘ಪ್ರೀತಿ ಸಹಬಾಳ್ವೆಗಾಗಿ ನಮ್ಮ ನಡೆ’ ಎಂಬ ಆಶಯದೊಂದಿಗೆ ಹಮ್ಮಿಕೊಂಡ ಸಾಂಸ್ಕೃತಿಕ ಜಾಥಾವು ಬುಧವಾರ ಕೇರಳ-ಕರ್ನಾಟಕ ಗಡಿ ಪ್ರದೇಶದ ಪೊಯ್ಯತ್ತಬೈಲ್ ಮಣವಾಠಿ ಬೀವಿ ದರ್ಗಾ ಶರೀಫ್ ವಠಾರಕ್ಕೆ ಆಗಮಿಸಿತು.
ಸ್ಥಳೀಯ ದರ್ಸ್ ವಿದ್ಯಾರ್ಥಿಗಳು ಆಗಮಿಸಿದ ತಂಡವನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ದರ್ಸ್ ವಿದ್ಯಾರ್ಥಿಗಳಿಂದ ಐಕ್ಯತಾ ಗಾನಾಲಾಪನ, ರಾಷ್ಟ್ರೀಯ ಜಾಥಾ ತಂಡದ ಸದಸ್ಯರಿಂದ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. ಜಮಾಅತ್ ಅಧ್ಯಕ್ಷ ಡಿ.ಎಂ.ಕೆ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ‘ಮಣವಾಠಿ ಬೀವಿ ದರ್ಗಾದ ಇತಿಹಾಸ ಹಾಗೂ ಸಾಮರಸ್ಯದ ಕೇಂದ್ರ ಪೊಯ್ಯತ್ತಬೈಲ್’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಹಿರಿಯ ರಂಗಕರ್ಮಿ, ಸಾಂಸೃತಿಕ ಜಾಥಾ ತಂಡದ ಸಂಚಾಲಕ ಪ್ರಸನ್ನ ಹೆಗ್ಗೋಡು ಮಾತನಾಡಿ ‘ಮಾನವನ ಸಾರ್ಥಕ ಬದುಕು ಮತ್ತು ರಾಷ್ರೀಯ ಏಕತೆ ಪ್ರೀತಿ, ಸಹಬಾಳ್ವೆಯಿಂದ ಮಾತ್ರ ಸಾಧ್ಯ ಎಂದರು.
ವೇದಿಕೆಯಲ್ಲಿ ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ, ಸದಸ್ಯೆ ಗೀತಾ ಸಾಮಾನಿ, ಜಮಾಅತ್ ಉಪಾಧ್ಯಕ್ಷ ಮುಹಮ್ಮದ್ ಪರನೀರ್, ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಎನ್., ಕಾರ್ಯದರ್ಶಿಗಳಾದ ಮಜಾಲ್ ಮುಹಮ್ಮದ್, ಅಬೂಸಾಲಿ, ಕೋಶಾಧಿಕಾರಿ ಮುಹಮ್ಮದ್ ಹಾಜಿ ಅಸನಬೈಲ್, ಸದಸ್ಯರಾದ ಮೂಸಾ ಡಿ.ಕೆ, ಅಬ್ದುಲ್ ಅಝೀಝ್, ಇಬ್ರಾಹಿಂ ಬದಿ ಯಾರ್, ಕುಂಞಿ ಕಿನ್ನಜೆ, ಪ್ರಮುಖರಾದ ನಾಗೇಶ್ ಕಲ್ಲೂರು, ದೂಮಪ್ಪಶೆಟ್ಟಿ ತಾಮಾರು, ಸದಾಶಿವ ಪೊಯ್ಯತ್ತಬೈಲ್, ಕೃಷ್ಣ ನಡಕ, ಚಂದ್ರಹಾಸ ಕಣಂತೂರು, ಡಾ.ಎನ್. ಇಸ್ಮಾಯಿಲ್, ಉಮೇಶ ಅಸನಬೈಲ್, ಸೀತಾರಾಮ ಬೇವಿಂಜೆ, ಪೂವಪ್ಪ ಕಲ್ಲೂರು, ಎಸ್. ಮುಹಮ್ಮದ್, ಇಬ್ರಾಹಿಂ ಹಾಜಿ ಸುಳ್ಯಮೆ, ಇಸ್ಮಾಯಿಲ್ ಕಣಂದೂರು ಉಪಸ್ಥಿತರಿದ್ದರು.
ಜಮಾಲುದ್ದೀನ್ ಸ್ವಾಗತಿಸಿದರು. ಮೂಸಾ.ಡಿ.ಕೆ. ವಂದಿಸಿದರು. ಇಸ್ಮಾಯಿಲ್ ಟಿ. ಕಾರ್ಯಕ್ರಮ ನಿರೂಪಿಸಿದರು.