×
Ad

ಮನೆ ನಿರ್ಮಿಸಲು ಸಹಾಯಧನ: ಅರ್ಜಿ ಆಹ್ವಾನ

Update: 2023-12-07 19:29 IST

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಸ್ವಂತ ಜಾಗ ಹೊಂದಿರುವ ವಸತಿರಹಿತ ಅರ್ಹ ಮಹಿಳಾ ಫಲಾನುಭವಿಗಳಿಗೆ 700 ಚ.ಅ. ಮಿತಿಯೊಳಗಿರುವ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಸತಿರಹಿತ ಬಡ ಕುಟುಂಬಗಳಿಗೆ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ 1.20 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಸತಿರಹಿತ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು 2021- 22ನೇ ಸಾಲಿನ ಡಾ. ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 2 ಲಕ್ಷ ರೂ.ಸಹಾಯಧನ ದೊರೆಯಲಿದೆ.

ಹೊಸದಾಗಿ ಮನೆ ನಿರ್ಮಿಸಿಕೊಳ್ಳುವ ಕುಟುಂಬವು ಫಲಾನುಭವಿಯ ಅಥವಾ ಗಂಡನ ಹೆಸರಿನಲ್ಲಿ ಸ್ವಂತ ನಿವೇಶನ ಹೊಂದಿರಬೇಕು ಮತ್ತು ಸೂಕ್ತ ಭೂದಾಖಲೆಗಳನ್ನು ಹೊಂದಿರಬೇಕು. ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರ), ಜಾತಿ ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 2 ಲಕ್ಷ ರೂ.), ನಿವೇಶನ ಸಂಬಂಧಿಸಿದ ದಾಖಲೆಗಳು (ಆರ್‌ಟಿಸಿ ಖಾತಾ ನಕಲು, ನಿವೇಶನ ನಕ್ಷೆ), ಕಟ್ಟಡ ಪರವಾನಿಗೆ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ರಾಷ್ಟ್ರೀಯ ಬ್ಯಾಂಕ್‌ನಲ್ಲಿರುವ ಖಾತೆಯ ಪ್ರತಿ, ಅಫಿದಾತ್ (ಫಲಾನುಭವಿಯ ಹೆಸರಿನಲ್ಲಿ ಈಗಾಗಲೇ ಪಕ್ಕಾ ಮನೆ ಇಲ್ಲವೆಂದು) ಪ್ರತಿಯನ್ನು ನಗರ ಬಡತನ ನಿರ್ಮೂಲನ ಕೋಶ, ಮಂಗಳೂರು ಮಹಾನಗರ ಪಾಲಿಕೆ, ಲಾಲ್‌ಭಾಗ್ ಕಚೇರಿಗೆ ಡಿ.20ರೊಳಗೆ ಅರ್ಜಿಸಲ್ಲಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News