×
Ad

ಸಂತ ಆಗ್ನೇಸ್ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಜಾಥಾ

Update: 2023-12-10 18:58 IST

ಮಂಗಳೂರು: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಸಂತ ಆಗ್ನೇಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ ವಾರ್ಷಿಕ ವಿಶೇಷ ಶಿಬಿರವು ನಗರದ ಮೇರಿಹಿಲ್ ಇನ್‌ಫೆಂಟ್ ಜೀಸಸ್ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿದ್ದು, ರವಿವಾರ ಪರಿಸರ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ನಡೆಯಿತು.

ಪರಿಸರವಾದಿ ಕೃಷ್ಣಪ್ಪ ಜಾಥಾಗೆ ಚಾಲನೆ ನೀಡಿದರು. ಹಸಿರುದಳದ ಸಂಸ್ಥಾಪಕ ನಾಗರಾಜ್, ಪತ್ರಕರ್ತ ಹರೀಶ್ ಮೋಟು ಕಾನ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಡೊಂಬಯ್ಯ ಇಡ್ಕಿದು, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಉದಯ ಕುಮಾರ್, ಡಾ.ಮೀರಾದೇವಿ, ಸಹಾಯಕ ಅಧಿಕಾರಿಗಳಾದ ಕೆ.ಎಂ.ಚೇತನ, ಪ್ರೀತಾ ತಾವ್ರೋ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News