×
Ad

ಯುವಕ ನಾಪತ್ತೆ

Update: 2023-12-10 19:54 IST

ಮಂಗಳೂರು, ಡಿ.10: ನಗರದ ಬಜಾಲ್ ಪಕ್ಕಲಡ್ಕದ ಕ್ಲಿನಿಕ್‌ಗೆ ಸಹೋದರನ ಆರೈಕೆಗೆ ಬಂದಿದ್ದ ಬಂಟ್ವಾಳದ ದಿನೇಶ್ ಗೌಡ(33) ನಾಪತ್ತೆಯಾಗಿದ್ದಾರೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ.7ರಂದು ಬೆಳಗ್ಗೆ ಕ್ಲಿನಿಕ್‌ಗೆ ಬಂದು ಚಾ ಕುಡಿಯಲೆಂದು ಹೊರಗೆ ಹೋದವರು ವಾಪಸ್ ಬಂದಿಲ್ಲ. ಗೋಧಿ ಮೈಬಣ್ಣ, ಸಪೂರ ಶರೀರ, ಕೋಲುಮುಖ ಹೊಂದಿರುವ ಇವರು 5 ಅಡಿ ಎತ್ತರವಿದ್ದು, ನೇರಳೆ ಬಣ್ಣದ ಶರ್ಟ್, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತವರು ಕಂಕನಾಡಿ ನಗರ ಪೊಲೀಸ್ ಠಾಣೆ (0824- 2220529)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News