ಉಳ್ಳಾಲದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ
ಮಂಗಳೂರು: ಉಳ್ಳಾಲ ಕ್ಲಸ್ಟರ್ ವ್ಯಾಪ್ತಿಯಲ್ಲಿ ವಿವಿಧ ಶಾಲೆಗಳಲ್ಲಿ ಸೇವೆ ಮಾಡಿ ನಿವೃತ್ತರಾದ ಟಿಪ್ಪುಸುಲ್ತಾನ್ ವಿದ್ಯಾಸಂಸ್ಥೆಯ ಮುಖ್ಯ ಗುರು ಹಾಜಿ ಎಂಎಚ್ ಮಲಾರ್, ಒಂಭತ್ತುಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ, ಬಿಎಂ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಉಷಾ ಮೊಗವೀರ, ಶಿಕ್ಷಕಿಯರಾದ ವೀಣಾ, ಶಶಿಕಲಾ, ಜಾಸ್ಮಿನ್ ವತ್ಸಲ, ಲಿಡ್‌ವಿನ್ ಎಲಿಜಬೆತ್, ಬೆನಿಡಿಕ್ಟ ಮಾಬೇನ್, ಅರುಣಾಕ್ಷಿ, ಮೆಟಿಲ್ದ ಕ್ಯಾಸ್ಟಲ್ಲಿನೋ ಅವರನ್ನು ಸನ್ಮಾನಿಸಲಾಯಿತು.
ಉಳ್ಲಾಲ ಕ್ಲಸ್ಟರ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಹಳೆಕೋಟೆ ಸೈಯದ್ ಮದನಿ ವಿದ್ಯಾ ಸಂಸ್ಥೆಗಳ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ಅವರನ್ನು ಸನ್ಮಾನಿಸಲಾಯಿತು.
ಪದನಿಮಿತ್ತ ಸಹ ನಿರ್ದೇಶಕ ಡಾ.ಸಿಪ್ರಿಯನ್ ಮೊಂತೇರೋ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಬ್ಲಾಕ್ ಸಂಪನ್ಮೂಲ ವ್ಯಕ್ತಿ ಸುಷ್ಮಾ ಸ್ವಾಗತಿಸಿದರು. ಟಿಪ್ಪುಸುಲ್ತಾನ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ಪ್ರಾರ್ಥನೆಗೈದರು. ಅತಿಥಿಗಳಾಗಿ ಭಾರತ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿನಯ, ಬಿಆರ್‌ಪಿ ಸವಿತಾ, ಸರಕಾರಿ ಉರ್ದು ಪ್ರೌಢಶಾಲೆ ಮೇಲಂಗಡಿಯ ಮುಖ್ಯ ಶಿಕ್ಷಕಿ ಆಶಾ, ಸಿಆರ್‌ಪಿ ಹರೀಶ್, ಹಜರತ್ ಸಯ್ಯದ್ ಮದನಿ ಶಾಲೆಯ ಮುಖ್ಯ ಶಿಕ್ಷಕ ರಸೂಲ್ ಖಾನ್ ಉಪಸ್ಥಿತರಿದ್ದರು. ಉಳ್ಳಾಲದ ಸಿಆರ್‌ಪಿ ಮೋಹನ್ ವಂದಿಸಿದರು. ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.