ಬಂಟ್ವಾಳ : ಅಕ್ರಮ ದನ ಸಾಗಾಟ; ಕಾರು, ಜಾನುವಾರು ವಶಕ್ಕೆ
Update: 2023-12-11 22:28 IST
ಬಂಟ್ವಾಳ : ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಕಾರೊಂದನ್ನು ಬೆನ್ನಟ್ಟಿದ ಬಂಟ್ವಾಳ ನಗರ ಪೊಲೀಸರು ಕಾರು ಹಾಗೂ ದನಗಳನ್ನು ವಶಪಡಿಸಿಕೊಂಡ ಘಟನೆ ಲೊರೆಟ್ಟೋ ಪದವು ಬಳಿ ನಡೆದಿದೆ.
ನಗರ ಠಾಣಾ ಎಸ್. ಐ.ರಾಮಕೃಷ್ಣ ಅವರು ರವಿವಾರ ರಾತ್ರಿ ರೌಂಡ್ಸ್ ನಲ್ಲಿದ್ದ ವೇಳೆ ಓಮ್ನಿ ಕಾರೊಂದರ ಮೇಲೆ ಸಂಶಯ ಗೊಂಡು ಬೆನ್ನಟ್ಟಿದಾಗ ಕಾರು ಟಿಪ್ಪುನಗರ ಕಡೆಗೆ ಹೋಗಿದ್ದು ಕಾರನ್ನು ಅಲ್ಲೇ ಲೊರೆಟ್ಟೋ ಪದವು ಬಳಿ ರಸ್ತೆಯಲ್ಲಿ ಬಿಟ್ಟು ಚಾಲಕ ಮತ್ತು ಕಾರಿನಲ್ಲಿದ್ದ ಇನ್ನೋರ್ವ ಪರಾರಿಯಾಗಿದ್ದಾರೆ.
ಕಾರಿನಲ್ಲಿ ಐದು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೈ ಕಾಲು ಕಟ್ಟಿ ತುಂಬಿಸಲಾಗಿತ್ತು. ಆರೋಪಿಗಳ ಬಗ್ಗೆ ಪೋಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.