ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ
ಮಂಗಳೂರು, ಡಿ.24: ನಗರದ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನವು ರವಿವಾರ ಕೋಡಿಯಾಲ್‌ಬೈಲ್‌ನ ಕೆನರಾ ಪ್ರೌಢಶಾಲೆಯಲ್ಲಿ ನಡೆಯಿತು. ಈ ಸಂದರ್ಭ ಶತಮಾನಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ಮ್ಯೂಸಿಯಂ ಉದ್ಘಾಟಿಸಲಾಯಿತು.
ಭಾರತ ಸರಕಾರದ ಪುರಾತತ್ವ ಮತ್ತು ಉತ್ಖನನ ಇಲಾಖೆಯ ಮಾಜಿ ನಿರ್ದೇಶಕ ರಾಮಚಂದ್ರ ಹೆಗಡೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಮಾಜಿ ಪ್ರಾಧ್ಯಾಪಕ ಮುರುಗೇಶ್ ತುರುವೇಕೆರೆ, ಕೇರಳ ಸರಕಾರದ ಪುರಾತತ್ವ ಇಲಾಖೆಯ ಡಾ.ವಿ.ಆರ್.ಶಾಜಿ, ಪ್ರಭಾಕರ ಕಿಣಿ, ರಾಮದಾಸ್ ಪ್ರಭು, ಮಹಾತ್ಮ ಗಾಂಧಿ ಮ್ಯೂಸಿಯಂನ ಪುನರ್ವಿನ್ಯಾಸಕ್ಕೆ ಕೊಡುಗೆ ನೀಡಿದ ಸುಜಯ್ ಲೋಬೋ ಮ್ಯೂಸಿಯಂ ಉದ್ಘಾಟಿಸಿದರು. ಮ್ಯೂಸಿಯಂ ನಿರ್ದೇಶಕ ಪಯ್ಯನೂರು ರಮೇಶ್ ಪೈ ಉಪಸ್ಥಿತರಿದ್ದರು.
ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಕಾಮತ್, ಕಾರ್ಯದರ್ಶಿ ಎಂ.ರಂಗನಾಥ್ ಭಟ್, ಸದಸ್ಯರಾದ ಸುರೇಶ್ ಕಾಮತ್, ಗೋಪಾಲಕೃಷ್ಣ ಶೆಣೈ, ಸಿಎ ಎಂ.ವಾಮನ್ ಕಾಮತ್, ಬಸ್ತಿ ಪುರುಷೋತ್ತಮ ಶೆಣೈ, ಶಿವಾನಂದ ಶೆಣೈ, ಯೋಗೀಶ್ ಕಾಮತ್, ನರೇಶ್ ಶೆಣೈ, ಅಶ್ವಿನಿ ಕಾಮತ್, ಗೋಪಿನಾಥ್ ಭಟ್, ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿಆರ್‌ಒ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಗೋಪಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.