×
Ad

ಶ್ರದ್ಧೆ, ಕಠಿಣ ಪರಿಶ್ರಮ ಪಟ್ಟರೆ ಯಶಸ್ಸು ಖಂಡಿತ: ರಾಯನ್ ಫೆರ್ನಾಂಡಿಸ್

Update: 2023-12-24 20:07 IST

ಕಾರ್ಕಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ಆಯ್ಕೆಗಳಿದ್ದು, ಯಾವುದೇ ಗೊಂದಲಕ್ಕೊಳಗಾಗದೆ ನಮಗೆ ಯೋಗ್ಯ ಮಾರ್ಗ ಆಯ್ಕೆ ಮಾಡಿಕೊಂಡು, ಅದರಲ್ಲಿ ಶೃದ್ಧೆಯಿಂದ ಪರಿಶ್ರಮ ಪಟ್ಟರೆ ಜೀವನದಲ್ಲಿ ಮುಂದೆ ಬರಬಹುದು ಎಂದು ರಾಯನ್ ಫೆರ್ನಾಂಡಿಸ್ ಹೇಳಿದ್ದಾರೆ. ಮುಲ್ಲಡ್ಕ ಡಾನ್ ಬೋಸ್ಕೋ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಫಾ. ಅರವಿಂದ್ ಸೆವೆರೆಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮೂಡಬಿದ್ರೆಯ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ವಿಭಾಗದ ಸಹ ಪ್ರಾಧ್ಯಾಪಕ ಪ್ರದೀಪ್ ನಜ್ಹರತ್, ಮುಲ್ಲಡ್ಕ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಲ್ಸಿ ಡಿಮೆಲ್ಲೋ, ಪಾಂಬೂರ್ ಚರ್ಚ್ ಹೈಯರ್ ಪ್ರೈಮರಿ ಸ್ಕೂಲ್‌ನ ಮಾಜಿ ಮುಖ್ಯೋಪಾಧ್ಯಾಯ ಹೆರಾಲ್ಡ್ ಡಿಮೆಲ್ಲೋ, ಫಾ. ಜೇಮ್ಸ್, ಫಾ. ವಿಲ್ಲೀಸ್ ಪಿಂಟೋ, ಫಾ. ಲಿಯ್ನಾಡ್ರೋ ಮತ್ತಿತರರು ವೇದಿಕೆಯಲ್ಲಿದ್ದರು.

ಫಾ. ಎರ್ನಾಲ್ಡ್ ಮಥಾಯಸ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಫಾ. ಮಿಲ್ಟನ್ ಫೆರ್ನಾಂಡಿಸ್ ವಂದಿಸಿದರು. ಶಾಲಾ ವಿದ್ಯಾರ್ಥಿ ರಿಶಾನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News