×
Ad

ಜಾತಿ, ಮತ, ಧರ್ಮಪರಿಗಣಿಸದೆ ಅಸಹಾಯಕರಿಗೆ ಸಹಾಯ ಮಾಡುವುದೇ ಗೆಲುವು: ರಮೇಶ್ ಅರವಿಂದ್

Update: 2023-12-25 21:14 IST

ಮಂಗಳೂರು: ಜಾತಿ, ಮತ, ಧರ್ಮಪರಿಗಣಿಸದೆ ಅಸಹಾಯಕರಿಗೆ ಸಹಾಯ ಮಾಡುವುದೇ ಬದುಕಿನಲ್ಲಿ ನಾವು ಸಾಧಿಸುವ ಗೆಲುವು ಎಂದು ಪರಿಗಣಿಸ ಬೇಕಾಗಿದೆ ಎಂದು ಖ್ಯಾತ ಚಲನ ಚಿತ್ರ ನಟ ರಮೇಶ್ ಅರವಿಂದ್ ತಿಳಿಸಿದ್ದಾರೆ.

ನಗರದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಂಆರ್ ಜಿ ಸಮೂಹ ಸಂಸ್ಥೆಯ ಮೂಲಕ ಇಂದು ಹಮ್ಮಿಕೊಂಡಿದ್ದ ಆಶಾ ಪ್ರಕಾಶ್ ಶೆಟ್ಟಿ 'ನೆರವು' ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ಬಲಶಾಲಿ ಮೇಲೆ ನಾವು ಸಾಧಿಸುವ ಗೆಲುವು ನಿಜವಾದ ಗೆಲುವಲ್ಲ. ಸಮಾಜದಲ್ಲಿರುವ ಅಸಾಯಕರಿಗೆ, ದುರ್ಬಲರಿಗೆ ಮಾಡುವ ಸಹಾಯದಲ್ಲಿ ನಿಜವಾದ ಗೆಲುವು ಅಡಗಿದೆ. ಇನ್ನೊಬ್ಬರ ಹಿತಕ್ಕಾಗಿ ನಿಷ್ಠೆ ಯಿಂದ, ನಂಬಿಕೆ ಯಿಂದ ಮಾಡುವ ಕೆಲಸದಲ್ಲಿ ನಮ್ಮ ಯಶಸ್ಸು ಅಡಗಿದೆ. ಎಂಆರ್ ಜಿ ಸಂಸ್ಥೆಯ ಪ್ರಕಾಶ್ ಶೆಟ್ಟಿ ಸಮಾಜದಲ್ಲಿ ಅಶಕ್ತರಿಗೆ ಆಶಾ ಪ್ರಕಾಶ್ ಶೆಟ್ಟಿ ನೆರವು ಕಾರ್ಯ ಕ್ರಮದ ಮೂಲಕ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದು ರಮೇಶ್ ಅರವಿಂದ್ ಮಾರ್ಮಿಕವಾಗಿ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂಆರ್ ಜಿ ಸಮೂಹ ಸಂಸ್ಥೆ ಗಳ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಯವರು ಮಾತನಾಡುತ್ತಾ, ಬಡತನ ದಲ್ಲಿ ಹುಟ್ಟಿದ ನನಗೆ ಬಡತನದ ಬದುಕಿನ ಬವಣೆ ಗಳ ಅರಿವಿದೆ.ನಾನು ಸನ್ಮಾರ್ಗದ ಮೂಲಕ ಮಾಡಿದ ಸಂಪಾದನೆ ಸದ್ವಿನಿ ಯೋಗ ವಾಗಬೇಕು ಎನ್ನುವ ನಿಟ್ಟಿನಲ್ಲಿ "ನನ್ನ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ, ಅರೋಗ್ಯವನ್ನು ನೀಡುವ ಉದ್ದೇಶದಿಂದ ಎಂ.ಆರ್.ಜಿ. ಗ್ರೂಪ್ ಮೂಲಕ ಪ್ರತಿವರ್ಷ ನೆರವು ನೀಡುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇನೆ. ಪ್ರಾರಂಭದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು ಈ ಬಾರಿ 4 ಕೋಟಿ 90ಲಕ್ಷಕ್ಕೂ ಅಧಿಕ ನೆರವು ನೀಡಲು ಸಾಧ್ಯ ವಾಗಿದೆ. ಸಮಾಜದ ನೊಂದವರು, ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಎಂ.ಆರ್.ಜಿ. ಗ್ರೂಪ್ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದರು.

ಶೈಕ್ಷಣಿಕ ಸಾಧಕರಿಗೆ ವಿದ್ಯಾರ್ಥಿ ವೇತನ

ಪಿ.ಯು.ಸಿ.ಯಲ್ಲಿ 600/600 ಅಂಕ ಗಳಿಸಿದ ಅನನ್ಯ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ 625/625 ಅಂಕ ಗಳಿಸಿದ ವೀಕ್ಷಿತಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಯಿತು.

ಸಮಾರಂಭದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ, ಪ್ರಾಸ್ತಾವಿಕ ಮಾತು ಗಳನ್ನಾಡಿದ ಅವರು, ಪ್ರಕಾಶ್ ಶೆಟ್ಟಿ ಸಮಾಜ ಎಲ್ಲಾ ಸಮುದಾಯದ ಬಡವರಿಗೆ ನೆರವು ಶಿಕ್ಷಣ, ಆರೋಗ್ಯ ಇತರ ಮೂಲಭೂತ ಅಗತ್ಯ ಗಳಿಗೆ ತಮ್ಮ ದುಡಿಮೆಯ ಮೂಲಕ ನೆರವು ನೀಡುವ ಮನೋಭಾವ ಮಾದರಿ ಎಂದರು.

ಸಮಾರಂಭದ ವೇದಿಕೆ ಯಲ್ಲಿ ಎಂಆರ್ ಜಿ ಸಮೂಹ ಸಂಸ್ಥೆ ಗಳ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ,ಆಶಾ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ನಿ‌ತೇಶ್ ಶೆಟ್ಟಿ, ಪುರುಷೋತ್ತ ಮ ಭಂಡಾರಿ ನೆರವು ಕಾರ್ಯಕ್ರಮ ನಿರೂಪಿಸಿದರು.ಅನುಷ್ಕಾ ಗೌರವ ಶೆಟ್ಟಿ ವಂದಿಸಿದರು.





 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News