×
Ad

ಜಲಾಲ್‌ಬಾಗ್:ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ

Update: 2023-12-28 19:50 IST

ದೇರಳಕಟ್ಟೆ : ಇಲ್ಲಿಗೆ ಸಮೀಪದ ಜಲಾಲ್‌ಬಾಗ್ ಮಸ್ಜಿದುಲ್ ಅರಫಾ ಮತ್ತು ಮದ್ರಸತುಲ್ ಅರಫಾದ ವತಿಯಿಂದ ಮಜ್ಲಿಸ್ ನ್ನೂರ್ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ ಮತ ಪ್ರಭಾಷಣಾ ಕಾರ್ಯಕ್ರಮವು ಜಮಾಅತಿನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಖತೀಬ್ ಎಂ.ಕೆ ಅಬ್ದುಲ್‌ರ‌್ರಹ್ಮಾನ್ ಫೈಝಿ ದುಆಗೈದು ಕಾರ್ಯಕ್ರಮ ಉದ್ಘಾಟಿಸಿದರು. ವಳಚ್ಚಿಲ್ ಜುಮಾ ಮಸೀದಿಯ ಖತೀಬ್ ಐ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ‘ಹಾದಿ ತಪ್ಪುತ್ತಿರುವ ಯುವ ಸಮೂಹ’ ಎಂಬ ವಿಷಯದ ಕುರಿತು ಮತ ಪ್ರಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಮಸೀದಿಯ ಮುಅಝ್ಝಿನ್ ಮೊಹಿದೀನ್ ಮುಸ್ಲಿಯಾರ್, ಉದ್ಯಮಿ ಇಬ್ರಾಹಿಮ್ ಕತಾರ್, ಜಮಾಅತಿನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ, ಉಪಾಧ್ಯಕ್ಷ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಮುಹಮ್ಮದ್ ಫಾರೂಕ್, ಮದ್ರಸದ ಮೇಲುಸ್ತುವಾರಿ ಪಿ.ಕೆ. ಅಬೂಬಕ್ಕರ್, ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ರ‌್ರಹ್ಮಾನ್ ಹಾಜಿ, ಹಮೀದ್ ಡ್ರೈವರ್ ಉಪಸ್ಥಿತರಿದ್ದರು.

ಮಜ್ಲಿಸ್‌ನ್ನೂರ್ ಸಂಚಾಲಕ ಮಹಮ್ಮದಾಲಿ ಹಾಜಿ ಸ್ವಾಗತಿಸಿದರು.ಮದ್ರಸದ ಮೇಲ್ವಿಚಾರಕ ಹಮೀದ್ ಪಜೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News