ಭಾರತ ಸೇವಾದಳದಿಂದ ಶತಮಾನೋತ್ಸವ ಕಾರ್ಯಕ್ರಮ
ಮಂಗಳೂರು : ಭಾರತ ಸೇವಾದಳದ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಸೇವಾದಳದ ಶತಮಾನೋತ್ಸವ ಅಂಗವಾಗಿ ಗುರುವಾರ ನಗರದ ಪುರಭವನದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಕಾರ್ಯಕ್ರಮ ನಡೆಯಿತು.
ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ ಜೀವನದಲ್ಲಿ ಅವಕಾಶ ಸಿಗುವುದು ಕಡಿಮೆ. ಭಾರತ ಸೇವಾ ದಳದಲ್ಲಿದ್ದುಕೊಂಡು ದೇಶ ಸೇವೆಯ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಲಿಯುವುದು ಎಲ್ಲರ ಭಾಗ್ಯವಾಗಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಬೇಕು ಎಂದರು.
ಸೇವಾದಳದ ಶಾಲಾ ವಿದ್ಯಾರ್ಥಿಗಳು ನಗರದ ಬಲ್ಮಠದಲ್ಲಿರುವ ಸರಕಾರಿ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜು ಆವರಣದಿಂದ ಪುರಭವನ ಗಾಂಧಿ ಪಾರ್ಕವರೆಗೆ ಪುರಮೆರವಣಿಗೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ, ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಪದಾಧಿಕಾರಿಗಳಾದ ಉದಯ್ ಕುಂದರ್, ಪ್ರೇಮ್‌ಚಂದ್, ಕೃತಿನ್ ಕುಮಾರ್, ಸಂಘಟಕ ಮಂಜೇಗೌಡ, ಬೆಂಗ್ರೆ ಶಾಲಾ ಸಮಿತಿ ಅಧ್ಯಕ್ಷ ರಾಕೇಶ್ ಉಪಸ್ಥಿತರಿದ್ದರು.