×
Ad

ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಸಂಸ್ಥಾಪನಾ ದಿನಾಚರಣೆ

Update: 2023-12-28 19:52 IST

ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆಯು ಗುರುವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭನನದಲ್ಲಿ ಜರುಗಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಬಾಪೂಜಿ ಅವರೊಂದಿಗೆ ಸೇರಿಕೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂಬ ಸಂಸ್ಥೆ ಪ್ರಾರಂಭವಾಯಿತು. ದೇಶದ ಉದ್ದಗಲಕ್ಕೂ ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿದ ಏಕೈಕ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಚುನಾವಣೆಯಲ್ಲಿ ಸೋತರೂ ಗೆದ್ದರೂ ದೃಢ ಸಂಕಲ್ಪದಲ್ಲಿರುವ ಕಾರ್ಯಕರ್ತರನ್ನು ಹೊಂದಿದ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.

ಮಾಜಿ ಸಚಿವ ರಮಾನಾಥ್ ರೈ ಮಾತನಾಡಿದರು. ಈ ಸಂದರ್ಭ ಕಾಂಗ್ರೆಸ್ ಮುಂಖಡರಾದ ಪಿ.ವಿ. ಮೋಹನ್, ಶಕುಂತಳಾ ಶೆಟ್ಟಿ, ಆರ್. ಪದ್ಮರಾಜ್, ಕೃಪಾ ಅಮರ್ ಆಳ್ವ, ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಹರಿನಾಥ್ ಕೆ., ಕೆ.ಕೆ. ಶಾಹುಲ್ ಹಮಿದ್, ಶುಭೋದಯ ಆಳ್ವ, ಕವಿತಾ ಸನಿಲ್, ನೀರಜ್‌ಚಂದ್ರಪಾಲ್, ಪ್ರವೀಣ್‌ಚಂದ್ರ ಆಳ್ವ, ಶಬೀರ್ ಎಸ್, ಬಿ.ಎಂ. ಅಬ್ಬಾಸ್ ಅಲಿ, ಸಂಶುದ್ದೀನ್ ಕುದ್ರೋಳಿ, ಶಮೀರ್ ಪಜೀರ್, ಪೂರ್ಣೇಶ್ ಭಂಡಾರಿ, ಸುಹಾನ್ ಆಳ್ವ, ಅಶೋಕ್ ಡಿ.ಕೆ, ಝೀನತ್ತ್ ಸಂಶುದ್ದೀನ್ ಬಂದರ್, ಯೊಗೀಶ್ ಕುಮಾರ್, ವಿಶ್ವನಾಥ್ ಬಜಾಲ್, ಶಶಿಕಲಾ ಪದ್ಮನಾಭ, ನಾಗೇಶ್ ತೊಕ್ಕೊಟ್ಟು, ರೊಬೈರ್ ತಲಮೊಗರು ಉಪಸ್ಥಿತರಿದ್ದರು. ಸೇವಾದಳದ ಜಿಲ್ಲಾ ಮುಖ್ಯಸ್ಥ ಜೋಕಿಮ್ ಡಿಸೋಜ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News