×
Ad

ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಅಸ್ತಿತ್ವಕ್ಕೆ

Update: 2024-01-06 18:55 IST

ಇಮ್ತಿಯಾಝ್ - ಹರೀಶ್ ಪೂಜಾರಿ

ಮಂಗಳೂರು : ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾಭಿಮಾನದ ಬದುಕಿಗಾಗಿ ರಾಜ್ಯದಲ್ಲೇ ಪ್ರಥಮ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘವು ಮಂಗಳೂರಿನಲ್ಲಿ ರಚನೆಯಾಗಿದೆ.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ಅಧಿಕಾರಿ ವಿಲಾಸ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ದ.ಕ. ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ)ದ ನಿರ್ದೇಶಕ ಮಂಡಳಿ ಚುನಾವಣೆ ಇತ್ತೀಚೆಗೆ ನಡೆಯಿತು. 17 ಮಂದಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಬಿ.ಕೆ. ಇಮ್ತಿಯಾಝ್ ಮತ್ತು ಉಪಾಧ್ಯಕ್ಷರಾಗಿ ಸ್ಥಾನಕ್ಕೆ ಹರೀಶ್ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಮುಹಮ್ಮದ್ ಮುಸ್ತಫಾ, ದಯಾನಂದ ಶೆಟ್ಟಿ, ಮುಹಮ್ಮದ್ ಆಸೀಫ್, ಮೇರಿ ಡಿಸೋಜ, ಮೇಬಲ್ ಡಿಸೋಜ, ಪಿ.ಜಿ. ಅಬ್ದುಲ್ ರಫೀಕ್ ಬೆಂಗರೆ, ಅಬ್ದುಲ್ ರಹಿಮಾನ್, ಎಂ.ಕೆ. ರಿಯಾಝ್, ಇಸ್ಮಾಯಿಲ್ ಉಳ್ಳಾಲ, ನೌಶಾದ್ ಉಳ್ಳಾಲ, ಶ್ರೀನಿವಾಸ್ ಕಾವೂರು, ಜಿತೇಂದ್ರ ಅತ್ತಾವರ, ಮುಹಮ್ಮದ್ ತಂಜಿಲ್, ರೂಪೇಶ್ ನಾಯ್ಕ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News