×
Ad

ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸಭೆ

Update: 2024-01-09 22:01 IST

ಮಂಗಳೂರು : ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸಭೆಯು ಅಧ್ಯಕ್ಷ ಅಲ್ಹಾಜ್ ಕೆಎಸ್ ಮುಹಮ್ಮದ್ ಮಸೂದ್‌ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯ ಬಳಿಕ ಇತ್ತೀಚೆಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಾಜಿ ಕೆ.ಪಿ. ಅಹ್ಮದ್ ಪುತ್ತೂರು, ಹಾಜಿ ಬಿ.ಎಸ್. ಹಸನಬ್ಬ ಅಮ್ಮೆಂಬಳ, ಬಾವುಜಾನ್ ಬೆಂಗ್ರೆ ಹಾಗೂ ಸಾಮಾಜಿಕ ಕಾರ್ಯಕರ್ತ ಎ.ಕೆ. ಜಮಾಲುದ್ದೀನ್ ಅವರನ್ನು ಸನ್ಮಾನಿಸಲಾಯಿತು.

ಆರ್ಥಿಕವಾಗಿ ಹಿಂದುಳಿದ ಸನಾ ಫಾತಿಮಾ ಎಂಬವರಿಗೆ ಪುತ್ತೂರು ಘಟಕದಿಂದ ನಿರ್ಮಿಸಿದ ಮನೆಯ ಕೀಲಿ ಕೈಯನ್ನು ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಹಸ್ತಾಂತರಿಸಿದರು. ಆ ಮನೆಯ ದಾಖಲೆ ಪತ್ರವನ್ನು ಉಪಾಧ್ಯಕ್ಷ ಕೆ.ಪಿ. ಅಹ್ಮದ್ ಪುತ್ತೂರು ಹಸ್ತಾಂತರಿಸಿದರು.

ಈ ಸಂದರ್ಭ ಉಪಾಧ್ಯಕ್ಷರಾದ ಹಾಜಿ ಸಿ. ಮಹ್ಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಬಿ.ಎಂ. ಮುಮ್ತಾಝ್ ಅಲಿ, ಹಾಜಿ ಕೆಎಸ್ ಇಮ್ತಿಯಾಝ್ ಅಹ್ಮದ್ ಕಾರ್ಕಳ, ಕೆ. ಅಶ್ರಫ್, ಕೋಶಾಧಿಕಾರಿ ಹಾಜಿ ಮೂಸಾ ಮೊಯಿದಿನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News