×
Ad

ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ: ಮಹಿಳಾ ವಿದ್ಯಾರ್ಥಿನಿಲಯ ಯೋಜನೆಯ ಬ್ರೋಷರ್ ಬಿಡುಗಡೆ

Update: 2024-01-10 19:56 IST

ಮಂಗಳೂರು: ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕವು ನಗರದ ಬಲ್ಮಠದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಂಡಿರುವ ಮಹಿಳಾ ವಿದ್ಯಾರ್ಥಿನಿಲಯ ಯೋಜನೆಯ ಬ್ರೋಷರ್ ಬಿಡುಗಡೆ ಕಾರ್ಯಕ್ರಮವು ಯೋಜನೆಯ ಗೌರವಾಧ್ಯಕ್ಷರಾದ ರಿಯಾಝ್ ಬಾವ ಹಾಜಿ ಅವರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಯೋಜನೆಯ ಬ್ರೋಷರನ್ನು ಅನಾವರಣಗೊಳಿಸಿದ ರಿಯಾಝ್ ಬಾವ ಹಾಜಿ ಮಾತನಾಡಿ, ಈ ವಸತಿ ನಿಲಯದ ನಿರ್ಮಾಣ ಶೀಘ್ರವೇ ಪೂರ್ಣಗೊಂಡು, ಉನ್ನತ ಶಿಕ್ಷಣ ಪಡೆಯಲು ನಗರಕ್ಕೆ ಬರುವ ದೂರದೂರಿನ ಹೆಣ್ಣು ಮಕ್ಕಳ ಆಶಾ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.

ಯೋಜನೆಯ ಪ್ರಥಮ ಬ್ರೋಷರ್ ಪಡೆದ ಬಿ.ಎಂ. ಶರೀಫ್ ಹಾಜಿ ವೈಟ್ ಸ್ಟೋನ್ ಅವರು ಯೋಜನೆಯನ್ನು ಶ್ಲಾಘಿಸಿ, ಯಶಸ್ಸಿಗೆ ಶುಭ ಹಾರೈಸಿದರು.

ಯೋಜನಾ ಸಮಿತಿಯ ಸಲಹೆಗಾರರಾದ ಅಡ್ವಕೇಟ್ ಸಾದುದ್ದೀನ್ ಎಂ. ಸಾಲಿಹ್, ಶಾಹುಲ್ ಹಮೀದ್ ದಮಾಮ್, ಕಾಸಿಂ ಅಹ್ಮದ್ ಹಿದಾಯ ಫೌಂಡೇಶನ್, ವಸತಿ ನಿಲಯ ಯೋಜನಾ ಸಮಿತಿಯ ಅಧ್ಯಕ್ಷರಾದ ಅಬೂಬಕರ್ ಗ್ರೂಪ್ 4, ಖಜಾಂಜಿ ಇಮ್ತಿಯಾಝ್ ಖತೀಬ್, ಜಮೀಯ್ಯತುಲ್ ಫಲಾಹ್ ಮಂಗಳೂರು ಘಟಕದ ಅಧ್ಯಕ್ಷರಾದ ಬಿ.ಎಸ್ ಮುಹಮ್ಮದ್ ಬಶೀರ್, ಸಾಲಿಹ್ ಕೋಯ, ಇಸ್ಮಾಯಿಲ್ ಬಿಕರ್ನಕಟ್ಟೆ, ಯೋಜನಾ ಸಮಿತಿ ಕಾರ್ಯದರ್ಶಿ ನಝೀರ್ ಅಹ್ಮದ್, ಸೈಫುಲ್ಲಾ, ಅದ್ನಾನ್, ಮುಹಮ್ಮದ್ ಹನೀಫ್, ಫಯಾಝ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News