×
Ad

ಎಚ್‌ಪಿಸಿಎಲ್ ಮುಷ್ಕರ ವಾಪಾಸ್

Update: 2024-01-11 21:30 IST

ಮಂಗಳೂರು: ಸುರತ್ಕಲ್‌ನ ಎಚ್‌ಪಿಸಿಎಲ್ ಸಂಸ್ಥೆಯಲ್ಲಿ ಎಲ್‌ಪಿಜಿ ಬುಲೆಟ್ ಟ್ಯಾಂಕರ್ ಕ್ಲೀನರ್‌ಗಳ ಸಂಬಳ ವಿಷಯಕ್ಕೆ ಸಂಬಂಧಿಸಿ ನಡೆಯುತ್ತಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮುಷ್ಕರ ಹಿಂಪಡೆಯುವ ಬಗ್ಗೆ ನಿರ್ಧರಿಸಲಾಯಿತು. ಜು.12ರಿಂದ ಬುಲೆಟ್ ಟ್ಯಾಂಕರ್‌ಗಳಿಗೆ ಅಡುಗೆ ಅನಿಲ ಲೋಡಿಂಗ್ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಕ್ಲೀನರ್‌ಗಳಿಗೆ ಪ್ರತಿ ಟ್ರಿಪ್‌ಗೆ ನಿಗದಿಪಡಿಸಲಾದ 900 ರೂ.ಗೆ ಒಪ್ಪಿಕೊಂಡವು.

ಸಭೆಯಲ್ಲಿ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಎಚ್‌ಪಿಸಿಎಲ್ ಸಂಸ್ಥೆಯ ಅಧಿಕಾರಿಗಳು, ಬುಲೆಟ್‌ಟ್ಯಾಂಕರ್ಸ್ ಅಸೋಸಿಯೇಶನ್ ಹಾಗೂ ಕಾರ್ಮಿಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News