ಸುಳ್ಯ : ಯುವಕನಿಗೆ ತಂಡದಿಂದ ಹಲ್ಲೆ; ಪ್ರಕರಣ ದಾಖಲು
Update: 2024-01-13 20:37 IST
ಸುಳ್ಯ: ಜಾತ್ರೆಯ ಸಂತೆಯಲ್ಲಿ ಯುವಕನೋರ್ವನಿಗೆ ತಂಡವೊಂದು ಹಲ್ಲೆ ನಡೆಸಿದ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ಕಾಲೇಜೊಂದರ ವಿದ್ಯಾರ್ಥಿ, ಗುತ್ತಿಗಾರು ನಿವಾಸಿ ಜೋಸ್ಬಿನ್ ಬಾಬು ತನ್ನ ಸ್ನೇಹಿತರೊಂದಿಗೆ ಜಾತ್ರೆ ವೀಕ್ಷಿಸಲು ಹೋಗಿದ್ದು, ಈ ಸಂದರ್ಭ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.